ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಿಸಂನಲ್ಲಿ ಬ್ಯುಸಿಯಾದ ಅಮೂಲ್ಯ (Amulya | Cheluvina Chitthara | Premism | Rathnaja)
ಸುದ್ದಿ/ಗಾಸಿಪ್
Feedback Print Bookmark and Share
 
Amulya
MOKSHA
ಚೆಲುವಿನ ಚಿತ್ತಾರ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಚಿತ್ತಾರ ಬರೆದ ನಟಿ ಅಮೂಲ್ಯ ಪ್ರೇಮಿಸಂ ಚಿತ್ರದ ಮೂಲಕ ಈಗ ಮತ್ತೆ ಬೆಳ್ಳಿ ತೆರೆಗೆ ಬಂದಿದ್ದಾರೆ. ಮೊದಲ ಚಿತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಚೆಲುವಿನ ಚಿತ್ತಾರದ ಚೆಲುವೆ, ಓದಿನತ್ತ ಹೆಚ್ಚು ಗಮನ ಹರಿಸಿದ್ದರು. ಆದರೆ ಮತ್ತೆ ಚಿತ್ರರಂಗದತ್ತ ಎಳೆ ತಂದಿದ್ದು, ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್. ತಮ್ಮ ಮಗನಿಗಾಗಿ ಮಾಡಿದ ಚೈತ್ರದ ಚಂದ್ರಮ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಅಮೂಲ್ಯ. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.

ಇದೀಗ ರತ್ನಜ ನಿರ್ದೇಶನದ ಪ್ರೇಮಿಸಂ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ವರ್ಣ್ ಎಂಬ ಹೊಸ ನಟನನ್ನು ರತ್ನಜ ಪರಿಚಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 33 ದಿನಗಳ ಶೂಟಿಂಗ್ ಕಾರ್ಯ ಮುಗಿದಿದೆ. ಚಿತ್ರದ ಮುಖ್ಯ ದೃಶ್ಯಗಳ ಚಿತ್ರೀಕರಣ ಮತ್ತು ಹಾಡಿನ ಚಿತ್ರೀಕರಣವನ್ನು ಬೆಳಗಾಂನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು.

ರತ್ನಜ ತಮ್ಮ ಕೈಯಲ್ಲಿ ಅದ್ಬುತವಾದ ಹಾಡುಗಳನ್ನು ಬರೆಸಿದ್ದಾಗಿ ಹಂಸಲೇಖ ಹೇಳಿಕೊಂಡಿದ್ದಾರೆ. ಚಿತ್ರವನ್ನು ಅಜಯ್ ಗೌಡ ನಿರ್ಮಿಸುತ್ತಿದ್ದಾರೆ. ಆದಷ್ಟು ಬೇಗ ಚಿತ್ರ ಮುಗಿಸಿ ಪ್ರೇಕ್ಷಕರ ಮುಂದಿಡಬೇಕು ಎಂಬುದೇ ಸದ್ಯಕ್ಕೆ ನಿರ್ದೇಶಕ ರತ್ನಜ ಅವರ ಮುಂದಿರುವ ಯೋಚನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೆಲುವಿನ ಚಿತ್ತಾರ, ಪ್ರೇಮಿಸಂ, ಅಮೂಲ್ಯ, ರತ್ನಜ