ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಾಸ್ಯ ನಾಯಕ ಬೇಡವೆಂದ ಪ್ರೇಕ್ಷಕ (Komal | Comedy | Kannada Film | Chamkaysi Chindi Udaysi)
ಸುದ್ದಿ/ಗಾಸಿಪ್
Feedback Print Bookmark and Share
 
Komal
MOKSHA
ನಾಯಕ ನಾಯಕಿಯರಿಗಷ್ಟೇ ಮಣೆ ಹಾಕುವವರು ಗಾಂಧಿನಗರದ ಜನತೆ. ಚಿತ್ರದಲ್ಲಿ ಹಾಸ್ಯವೇ ಚಿತ್ರದ ಖ್ಯಾತಿಗೆ ಕಾರಣ ಎಂಬುದು ಗೊತ್ತಿದ್ದರೂ, ಅಂಥವರು ಮೂಲೆಗುಂಪಾಗಿಯೇ ಇರುವರು. ಇದೆಲ್ಲಾ ಹೇಳಿರುವುದಕ್ಕೆ ಕಾರಣವೂ ಇದೆ.

ಹೌದು. ಇದು ಕೋಮಲ್ ಚರಿತ್ರೆ. ಕಳೆದ ವರ್ಷದಲ್ಲಿ ಹಿಟ್ ಆಗಿರುವ ಹಲವು ಚಿತ್ರದಲ್ಲಿ ಕೋಮಲ್ ಕಾಣಿಸಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಗೆದ್ದಿವೆ. ಆದರೆ ಇಂದು ಕೋಮಲ್ ಒಬ್ಬ ನಾಯಕನಾಗಿ ಗಾಂಧಿನಗರಕ್ಕೆ ಬಂದಿದ್ದಾರೆ. ಆದರೆ ಪ್ರೇಕ್ಷಕ ನಾಯಕನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ.

ಇತ್ತೀಚೆಗೆ 'ಚಮ್ಕಾಯಿಸಿ ಚಿಂದಿ ಉಡಾಯಿಸಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕೋಮಲ್ ಮಾಡಿದ ಮೊದಲ ಕೆಲಸ ಎಂದರೆ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ತಂತ್ರಜ್ಞರನ್ನೂ ವೇದಿಕೆ ಕರೆದು ಅವರನ್ನು ಪರಿಚಯಿಸಿದರು. ಈ ಮೂಲಕ ಗೋಷ್ಠಿಯ ರೂಪುರೇಷೆಗಳನ್ನು ತಕ್ಕಮಟ್ಟಿಗೆ ಬದಲಿಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ ತನ್ನನ್ನು ಹೀರೋ ಅಂತ ಗುರುತಿಸಿಕೊಳ್ಳಲು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದು ಮಾತ್ರ ಕೋಮಲ್‌ಗೆ ಪ್ರಶ್ನೆಯಾಗಿಯೇ ಉಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಮಲ್, ಹಾಸ್ಯ ಚಿತ್ರ, ಕನ್ನಡ ಸಿನಿಮಾ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ