ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋಕುಲದಲ್ಲಿ ಮೂರ್ತಿ ಮಂದಹಾಸ (Gokula | Srinivasamurthy | Puja Gandhi | Nakshatra)
ಸುದ್ದಿ/ಗಾಸಿಪ್
Feedback Print Bookmark and Share
 
Gokula
MOKSHA
ಇದು ನಡೆದದ್ದು. ಗೋಕುಲ ಪತ್ರಿಕಾಗೋಷ್ಠಿಯಲ್ಲಿ. ನಟ ಶ್ರೀನಿವಾಸಮೂರ್ತಿ ತುಂಬಾ ಸಂತಸದಲ್ಲಿದ್ದರು. ಅದಕ್ಕೆ ಕಾರಣ ಇಷ್ಟೆ. ಇತ್ತ ಮುಂಗಾರು ಬೆಡಗಿ ಪೂಜಾಗಾಂಧಿ ಕೂತಿದ್ದರೆ, ಇತ್ತ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ಕೂತಿದ್ದರು.

Srinivasamurthy
MOKSHA
ಪೂಜಾ ಗಾಂಧಿ ಮಾತನಾಡುತ್ತಾ ಅರೆ ಬರೆ ಕನ್ನಡವನ್ನು ಸ್ಪಷ್ಟವಾಗಿ ಸುಲಲಿತವಾಗಿ ಬಿಡಿಸಿ ಹೇಳುತ್ತಿದ್ದರು ಶ್ರೀನಿವಾಸಮೂರ್ತಿ. ಇದರಲ್ಲಿ ಇವರದು ವೃದ್ಧನ ಪಾತ್ರ. ಇದುವರೆಗೆ ತಲೆಗೊಂದು ಟೊಪ್ಪಿ, ಕೈಯಲ್ಲೊಂದು ಲಾಟಿ, ಮೈ ತುಂಬಾ ಕಾಕಿ ತೊಟ್ಟ ಪೊಲೀಸ್ ಪೇದೆ ನೆನಪಾಗುತ್ತಿದ್ದ. ಅಪ್ಪು ಚಿತ್ರದ ನಂತರ ಹೆಚ್ಚಿನ ಚಿತ್ರಗಳಲ್ಲಿ ಮೂರ್ತಿಯವರು ಇದೇ ಪಾತ್ರವನ್ನು ಮಾಡುತ್ತಿದ್ದರು.

ಇದೀಗ ಈ ಚಿತ್ರದಲ್ಲಿ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಸುಮಿತ್ರಾ ನಟಿಸುತ್ತಿದ್ದಾರೆ. ಚಿತ್ರವನ್ನು ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ರಾಘವೇಂದ್ರ, ಯಶ್, ಪೂಜಾ ಗಾಂಧಿ, ನಕ್ಷತ್ರ ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀನಿವಾಸಮೂರ್ತಿ, ಗೋಕುಲ, ಪೂಜಾ ಗಾಂಧಿ, ನಕ್ಷತ್ರ, ಯಶ್, ವಿಜಯ್ ರಾಘವೇಂದ್ರ