ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತರುಣ್ ಧರ್ಮಸಂಕಟ (Parichaya | Tarun | Love Guru | Sanjay)
ಸುದ್ದಿ/ಗಾಸಿಪ್
Feedback Print Bookmark and Share
 
Tarun
MOKSHA
ಒಬ್ಬನೇ ನಾಯಕನ ಎರಡು ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ಏನಾಗಬಹುದು? ಇಂತಹದ್ದೊಂದು ಪರಿಸ್ಥಿತಿ ಈಗ ನಾಯಕ ತರುಣ್‌ದು. ಇವರು ನಟಿಸುತ್ತಿರುವ ಲವ್‌ಗುರು ಹಾಗೂ ಪರಿಚಯ ಒಟ್ಟೊಟ್ಟಿಗೆ ಬಿಡುಗಡೆ ಕಾಣುವ ನಿರೀಕ್ಷೆ ಇದೆ.

ಒಂದು ಲೆಕ್ಕದ ಪ್ರಕಾರ, ಪರಿಚಯ ಈ ಮೊದಲೇ ಬಿಡುಗಡೆಯಾಗಬೇಕಿತ್ತು. ತಡವಾಗಿಯಾದರೂ ಸರಿ ಒಳ್ಳೆಯ ಚಿತ್ರ ನೀಡಬೇಕೆಂಬ ಉದ್ದೇಶದಿಂದ ನಿರ್ದೇಶಕ ಸಂಜಯ್ ಚಿತ್ರದ ಪ್ರತಿಯೊಂದು ಅಂಶವನ್ನೂ ಅಳೆದು ತೂಗಿ ಚಿತ್ರವನ್ನು ತೆಗೆದಿದ್ದಾರಂತೆ. ಅದಕ್ಕೆ ಬಿಡುಗಡೆ ತಡವಾಗಿದೆ ಎಂಬುದು ಅವರ ಒಕ್ಕಣೆ. ಇದೇ ವೇಳೆ ತರುಣ್ ಅಭಿನಯದ ಇನ್ನೊಂದು ಚಿತ್ರ ಲವ್‌ಗುರು ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ 17ಕ್ಕೆ ಬಿಡುಗಡೆಗೆ ಮಾಡುವುದಾಗಿ ಚಿತ್ರದ ನಿರ್ಮಾಪಕರು ಘೋಷಣೆ ಮಾಡಿಯೇ ಬಿಟ್ಟಿದ್ದಾರೆ.

ಇದು ಪರಿಚಯ ಚಿತ್ರದ ನಿರ್ಮಾಪಕರಿಗೆ ತುಸು ಅಚ್ಚರಿಯಾಗಿದೆ. ಇದೀಗ ಚಿತ್ರವನ್ನು ಒಂದು ವಾರ ಮುಂದೂಡಲು ನಿರ್ಧರಿಸಿದ್ದಾರೆ. ಅಂದ ಹಾಗೆ ತರುಣ್ ಪರಿಚಯ ಚಿತ್ರದ ಬಳಿಕ ಲವ್‌ಗುರುವಿಗಾಗಿ ಎಂಟು ಕೆಜಿ ಇಳಿಸಿಕೊಂಡಿದ್ದಾರಂತೆ. ಅದಕ್ಕೆ ಎರಡು ಚಿತ್ರದಲ್ಲಿ ತರುಣ್ ತೂಕದಲ್ಲಿ ವ್ಯತ್ಯಾಸ ಕಂಡರೆ ಅಚ್ಚರಿಯಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪರಿಚಯ, ತರುಣ್, ಲವ್ ಗುರು, ಸಂಜಯ್