ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿಟ್ಟಿ ಜನುಮದಿನ (Srinagar Kitti | Olave Jeevana Lekkachara | Male Barali Manju Erali)
ಸುದ್ದಿ/ಗಾಸಿಪ್
Feedback Print Bookmark and Share
 
Srinagar Kitti
MOKSHA
ಜುಲೈ ತಿಂಗಳು ಬಂತೆಂದರೆ ಸಾಕು ಕನ್ನಡ ಚಿತ್ರರಂಗದ ಬಹಳಷ್ಟು ಮಂದಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಟಾಪ್ ಸ್ಟಾರ್‌ಗಳೆನಿಸಿರುವ ಬಹುತೇಕರ ಹುಟ್ಟುಹಬ್ಬ ಬರುವುದು ಇದೇ ತಿಂಗಳಲ್ಲಿ. ಮೊನ್ನೆ ಮೊನ್ನೆಯಷ್ಟೆ ಗಣೇಶ್, ಯೋಗೀಶ್, ಪ್ರಜ್ವಲ್, ಕೋಮಲ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು. ಇದೀಗ ಶ್ರೀನಗರ ಕಿಟ್ಟಿ ಸರದಿ.

ಆದರೆ ಈ ಬಾರಿಯ ಹುಟ್ಟುಹಬ್ಬ ಅವರಿಗೆ ಮೂರು ಪಟ್ಟು ಹೆಚ್ಚಿನ ಸಂಭ್ರಮ ನೀಡಲಿದೆ. ಒಂದು ಇತ್ತೀಚೆಗಷ್ಟೇ ತಮ್ಮ ಪ್ರಥಮ ವಾರ್ಷಿಕೋತ್ಸವ ಸಂಭ್ರಮವಾದರೆ, ಅವರ ಅಭಿನಯದ ಸವಾರಿ ಚಿತ್ರ ಕೆಲವೇ ದಿನಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳಲಿದೆ.

ಈಗಾಗಲೇ ಇವರ ಅಭಿನಯದ ಒಲವೇ ಜೀವನ ಲೆಕ್ಕಚಾರ ಹಾಗೂ ಸವಾರಿ ಎರಡೂ ಕೂಡಾ ಚಿತ್ರಮಂದಿರದಲ್ಲಿದೆ. ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಮಳೆ ಬರಲಿ ಮಂಜು ಇರಲಿ ಚಿತ್ರ ಇನ್ನೇನು ತೆರೆ ಬರಲಿದೆ. ಈ ನಡುವೆ ಎಂ.ಕೆ. ಮಠ ನಿರ್ದೇಶಿಸಲಿರುವ ಮರಳಿ ಮರೆಯಾಗಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅತ್ತ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಕಿಟ್ಟಿ ಇಷ್ಟು ವರ್ಷ ಗೆಲುವಿಗಾಗಿ ಸಹನೆಯಿಂದ ಕಾದದ್ದು ಸಾರ್ಥಕವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀನಗರ ಕಿಟ್ಟಿ, ಒಲವೇ ಜೀವನ ಲೆಕ್ಕಾಚಾರ, ಸವಾರಿ, ಮಳೆ ಬರಲಿ ಮಂಜೂ ಇರಲಿ