ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಗಿಣಿ ಸಂಭ್ರಮವೋ ಸಂಭ್ರಮ (Ragini | Veera Madakari | Sudeep | KannadaFilm)
ಸುದ್ದಿ/ಗಾಸಿಪ್
Feedback Print Bookmark and Share
 
Ragini
MOKSHA
ರಾಗಿಣಿ ತುಂಬಾ ಖುಷಿಯಲ್ಲಿದ್ದರು. ತಮ್ಮ ಅಭಿನಯದ ವೀರ ಮದಕರಿ ಚಿತ್ರ ಶತದಿನ ಆಚರಿಸುತ್ತಿದೆ ಎಂಬುದೇ ಇವರ ಸಂತಸಕ್ಕೆ ಕಾರಣ. ತಂತ್ರಜ್ಞರಿಗೆ ಪೂರ್ಣವಾಗಿ ಹಣ ಸಂಭಾವನೆಯಾಗಿಲ್ಲ ಎಂಬ ಕಾರಣದಿಂದ ಚಿತ್ರತಂಡದಲ್ಲಿ ಕೆಲವು ಭಿನ್ನಾಭಿಪ್ರಾಯವೆದ್ದಿತ್ತು.

ಆದರೆ ಸಂಭಾವನೆ ವಿಚಾರದಲ್ಲಿ ನಟಿ ರಾಗಿಣಿಗೇನೂ ತೊಂದರೆಯಾಗಿಲ್ಲವಂತೆ. ನನಗೆ ಖಂಡಿತ ಪೂರ್ಣ ಹಣ ಸಿಕ್ಕಿದೆ. ತಡವಾಗಿಯಾದರೂ ನಿಗದಿಗೊಳಿಸಿದ ಸಂಭಾವನೆ ಪಾವತಿಸಿದ್ದಾರೆ ಎನ್ನುತ್ತಾರೆ ರಾಗಿಣಿ. ನಾನು ಸುದೀಪ್ ಮತ್ತು ಚಿತ್ರದ ಇತರ ನಟರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಶತದಿನೋತ್ಸವದಂದು ಅವರೆಲ್ಲರೂ ಬ್ಯುಸಿಯಿದ್ದುದರಿಂದ ಬಂದಿಲ್ಲವಷ್ಟೆ ಎಂದು ಕಾರಣ ನೀಡುತ್ತಾರೆ ರಾಗಿಣಿ.

ಇದಕ್ಕೂ ಮುನ್ನ ನಟಿಸಿದ ಹೋಳಿ ಚಿತ್ರ ಇನ್ನು ಬಿಡುಗಡೆಯಾಗಬೇಕಿದೆ. ವೀರ ಮದಕರಿ ಈ ವರ್ಷದ ಯಶಸ್ವಿ ಚಿತ್ರಗಳಲ್ಲೊಂದು. ಮೊದಲ ಚಿತ್ರವೇ ಗೆದ್ದರೆ ನಟಿಗೆ ಅದಕ್ಕಿಂತ ಸಂಭ್ರಮವೇನಿದೆ ಹೇಳಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಗಿಣಿ, ವೀರ ಮದಕರಿ, ಕನ್ನಡ ಸಿನಿಮಾ