ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 20 ದಿನಗಳಲ್ಲಿ ಚಿತ್ರ ನಿರ್ದೇಶನ (Dinesh Babu | Ramesh Yadav | Januma Janumadallu)
ಸುದ್ದಿ/ಗಾಸಿಪ್
Feedback Print Bookmark and Share
 
Dinesh Babu
MOKSHA
ಸಿನಿಮಾಗಳೆಂದರೆ ಅರವತ್ತು, ಎಪ್ಪತ್ತು ದಿನಗಳ ಚಿತ್ರೀಕರಣ ಎಂಬುದು ಹಳೆಯ ಸುದ್ದಿ. ಆದರೆ ಇದೀಗ ನಿರ್ದೇಶಕ ದಿನೇಶ್ ಬಾಬು ಹೊಸದೊಂದು ಟ್ರೆಂಡ್‌ಗೆ ಮರಳಿದ್ದಾರೆ. ಇವರ ನಿರ್ದೇಶನದ ಚಿತ್ರ ಅಬ್ಬಾಬ್ಬಾ ಎಂದರೆ ಇಪ್ಪತ್ತು ದಿನ.

ಇವರ ಐದು ಚಿತ್ರಗಳು ಸಧ್ಯಕ್ಕೆ ಸಿದ್ಧವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಜನುಮದ ಗೆಳತಿ ಚಿತ್ರದ ನಂತರ ಯಾವೊಂದು ಚಿತ್ರವೂ ಈವರೆಗೆ ತೆರೆಕಂಡಿಲ್ಲ. ಆದರೆ ಆವಾಗಲೇ ಒಂದರ ಮೇಲೆ ಒಂದರಂತೆ ಐದು ಚಿತ್ರದ ಚಿತ್ರೀಕರಣ ಮುಗಿಸುವ ಧಾವಂತದಲ್ಲಿದ್ದಾರೆ.

ಈಗಾಗಲೇ ರಮೇಶ್ ಯಾದವ್ ನಿರ್ಮಿಸಿರುವ ಜನುಮಜನುಮದಲ್ಲೂ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಎರಡನೇ ಚಿತ್ರ ವಿಷ್ಣುವರ್ಧನ್-ಸುಹಾಸಿನಿ ಅಭಿನಯದ ಸ್ಕೂಲ್ ಮಾಸ್ಟರ್. ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ರಾಜಕಾರಣದತ್ತ ಗಮನ ಹರಿಸಿದ್ದರಿಂದ ಚಿತ್ರ ಬಿಡುಗಡೆ ತಡವಾಗಿದೆ. ಇದರ ಜೊತೆಗೆ ಮಿಸ್ಟರ್ ಪೇಂಟರ್, ಎರಡನೇ ಮದುವೆ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈಗ ಐದನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ. ಇದು ಕೆಲವೇ ದಿನಗಳಲ್ಲಿ ಇದು ಮುಗಿಯಲಿದೆ. ಮುಂದೇನು?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿನೇಶ್ ಬಾಬು, ರಮೇಶ್ ಯಾದವ್, ಜನುಮಜನುಮದಲ್ಲೂ, ಮಿಸ್ಟರ್ ಪೇಂಟರ್