ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೀಲ್ ಫೈಟ್ ಅಲ್ಲ, ಇದು ರಿಯಲ್ ಫೈಟ್! (Yash | Kallara Santhe | Agni Shridhar | Gokula)
ಸುದ್ದಿ/ಗಾಸಿಪ್
Feedback Print Bookmark and Share
 
Yash
MOKSHA
ಮೈಕೈ ನೋಯುತ್ತಿದೆ. ದೇಹ ಅಲ್ಲಾಡಿಸುವುದಕ್ಕೆ ಆಗುತ್ತಿಲ್ಲ. ಇದು ನಾಯಕ ಯಶ್ ಕಳ್ಳರ ಸಂತೆ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದ ಬಳಿಕ ಹೇಳಿದ ಮಾತು.

ಹೌದು. ಫೈಟ್ ದೃಶ್ಯಗಳಲ್ಲಿ ನಟಿಸುವಾಗ, ಕೆಲವೊಮ್ಮೆ ನಿಜವಾಗಿಯೂ ಒದೆ ತಿನ್ನಬೇಕಾಗುತ್ತದೆ. ಫೈಟ್ ಗಣಿತ ಇದ್ದಂತೆ. ಸಾಹಸ ನಿರ್ದೇಶಕರು ಲೆಕ್ಕಾಚಾರದಿಂದ ಫೈಟ್ ಸಂಯೋಜಿಸಿರುತ್ತಾರೆ. ನಮ್ಮ ಜೊತೆಗಿರುವ ಸಹನಟರು ಸ್ವಲ್ಪ ಏಮಾರಿದರೂ ನಾಯಕನಿಗೆ ಏಟು ಗ್ಯಾರಂಟಿ. ಕಳ್ಳರ ಸಂತೆ ಚಿತ್ರೀಕರಣದಲ್ಲಿ ಸ್ವಲ್ಪ ಲೆಕ್ಕಚಾರ ತಪ್ಪಾಗಿದ್ದಕ್ಕೆ ಚೆನ್ನಾಗಿ ನನಗೆ ಒದೆ ಬಿದ್ದವು ಎಂದು ವಿವರಿಸಿದರು ಯಶ್.

ಮೊಗ್ಗಿನ ಮನಸು ಚಿತ್ರದಲ್ಲಿ ಲವರ್ ಬಾಯ್, ರಾಕಿ ಚಿತ್ರದಲ್ಲಿ ಆಂಗ್ರಿ ಯಂಗ್ ಬಾಯ್ ಆದ ಯಶ್, ಕಳ್ಳರ ಸಂತೆಯಲ್ಲಿ ಡಿಸೆಂಟ್ ಪದವಿ ಮುಗಿಸಿದ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಅಗ್ನಿ ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ಪ್ರತಿ ದೃಶ್ಯ ರಿಯಾಲಿಸ್ಟಿಕ್ ಆಗಿರಬೇಕು ಎಂದು ಯೋಚಿಸುತ್ತಾರೆ ಅಗ್ನಿ ಎನ್ನುತ್ತಾರೆ ಯಶ್. ಅಂದಹಾಗೆ ಯಶ್ ಈಗ ಪ್ರಕಾಶ್ ನಿರ್ದೇಶನದ ಗೋಕುಲ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಶ್, ಕಳ್ಳರ ಸಂತೆ, ಅಗ್ನಿ ಶ್ರೀಧರ್, ಗೋಕುಲ