ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ನಿರ್ದೇಶನಕ್ಕಿಳಿದ ಉಪೇಂದ್ರ (Upendra | Rajani | A | Swasthik | Om)
ಸುದ್ದಿ/ಗಾಸಿಪ್
Feedback Print Bookmark and Share
 
Upendra
MOKSHA
ನಟ ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹಲವು ಬಾರಿ ಸುದ್ದಿ ಕೇಳಿ ಬರುತ್ತಲೇ ಇತ್ತು. ನಟನೆಯಲ್ಲಿ ಕಳೆದುಹೋಗಿರುವ ಅವರು ಮತ್ತೆ ನಿರ್ದೇಶಕರಾಗುವುದು ಯಾವಾಗ ಎನ್ನುವ ಬಗ್ಗೆ ಸ್ವತಃ ಉಪ್ಪಿಗೆ ಗೊತ್ತಿದ್ದಂತಿಲ್ಲ.

ಆದರೆ ಇದೀಗ ಗಾಂಧಿನಗರದಿಂದ ಒಂದು ಸುದ್ದಿ ಬಂದಿದೆ. ಉಪ್ಪಿ ತಮ್ಮ ಸ್ವಂತ ಬ್ಯಾನರ್‌ನಿಂದ ಚಿತ್ರ ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಓಂ, ಸ್ವಸ್ತಿಕ್ ಸಂಕೇತಗಳ ಚಿತ್ರದಂತೆ ಇಲ್ಲಿಯೂ ಸಂಕೇತದ ಶೀರ್ಷಿಕೆಯಿರುತ್ತದೆ ಎಂದು ಆಪ್ತರು ಹೇಳುತ್ತಾರೆ.

ಇದನ್ನು ಖಚಿತಪಡಿಸಿಕೊಳ್ಳಲು ಉಪ್ಪಿ ಗಾಂಧಿನಗರದಲ್ಲಿಲ್ಲ. ಸಧ್ಯಕ್ಕೆ ರಾಮು ನಿರ್ಮಾಣದ ರಜನಿ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ತೆರಳಿದ್ದಾರೆ. ರಜನಿ ಬಳಿಕ ಲಂಡನ್ ಗೌಡ ಚಿತ್ರ ಮುಗಿಸಿ ಉಪೇಂದ್ರ ನಿರ್ದೇಶನ ಅಥವಾ ನಿರ್ಮಾಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ರಜನಿ, ಎ, ಸ್ವಸ್ತಿಕ್, ಓಂ