ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಧೂಳೆಬ್ಬಿಸಲಿರುವ ಯೋಗಿ- ಐಂದ್ರಿತಾ! (Dhool | Yogeesh | Aindritha Rey | Remake | Dharani)
ಸುದ್ದಿ/ಗಾಸಿಪ್
Feedback Print Bookmark and Share
 
Dhool
MOKSHA
ಕನ್ನಡ ಚಿತ್ರರಂಗದಲ್ಲಿ ಕತೆ ಬರೆಯುವವರ ಸಂಖ್ಯೆ ಕಡಿಮೆಯೇನೋ ಎಂದೆನಿಸಿಬಿಟ್ಟಿದೆ. ಸಧ್ಯಕ್ಕೆ ಕನ್ನಡ ಹಲವು ಚಿತ್ರಗಳು ರಿಮೇಕ್ ಚಿತ್ರಗಳೇ. ಇದೀಗ ಅದೇ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ.

ಹೆಸರು ಧೂಳ್. ಇದು ತಮಿಳಿನ ತಿರುವಳಿಯಾಡರ್ ಆರಂಭಂ ಎಂಬ ಚಿತ್ರದ ರಿಮೇಕ್. ಚಿತ್ರವನ್ನು ಹಿರಿಯ ನಿರ್ದೇಶಕ ಎಂ.ಎಸ್. ರಾಜಶೇಖರ್ ಪುತ್ರ ಧರಣಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಯೋಗೀಶ್ ನಾಯಕ. ಯೋಗೀಶ್‌ಗೆ ಕನ್ನಡದಲ್ಲಿ ಸದ್ಯದ ಹಾಟ್ ಹುಡುಗಿ ಐಂದ್ರಿತಾ ರೇ ನಾಯಕಿ. ಈ ಚಿತ್ರದಲ್ಲಿ ಗ್ಲಾಮರ್ ಹೊರತಾದ ಪಾತ್ರದಲ್ಲಿ ಇವರು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ತಮಿಳಿನ ಚಿತ್ರ ನಾನು ನೋಡಿಲ್ಲ. ನಾಯಕಿ ಪಾತ್ರಕ್ಕಿಂತ ಕಥೆ ತುಂಬಾ ಇಷ್ಟವಾಯ್ತು. ಯೋಗಿಯ ಸಿನಿಮಾಗಳನ್ನು ನೋಡಿದ್ದೇನೆ. ಬಹುಶಃ ಇಬ್ಬರ ಕೆಮಿಸ್ಟ್ತ್ರಿ ಹೊಂದಾಣಿಕೆಯಾಗುತ್ತದೆ ಎನಿಸುತ್ತದೆ ಎನ್ನುತ್ತಾರೆ ಅಂದ್ರಿತಾ ರೇ.

ತಮಿಳಿನ ಪ್ರೇಕ್ಷಕರು ಮೆಚ್ಚುವ ರಿಯಾಲಿಟಿ ಕನ್ನಡದ ಮಣ್ಣಿಗೆ ಹೊಂದುವುದಿಲ್ಲ ಎನ್ನುವುದು ನಿರ್ದೇಶಕರಿಗೆ ಗೊತ್ತಿದೆ. ಆದರೂ ಕಥೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿವರಣೆ ನೀಡುತ್ತಾರೆ ನಿರ್ದೇಶಕ ರಾಜಶೇಖರ್. ಸಧ್ಯಕ್ಕೆ ನಾಯಕನ ಹೊರತಾಗಿ ಮತ್ತೊಂದು ಪ್ರಮುಖ ನಟನ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧೂಳ್, ಯೋಗೀಶ್, ಐಂದ್ರಿತಾ ರೇ, ರಿಮೇಕ್, ಧರಣಿ