ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಳೆಯಲ್ಲಿ ಚಂದ್ರುಗೆ ಕುಚ್ ಕುಚ್ ಹೋಗಯಾ! (Chandru | Male | Thajmahal | Prem Kahani)
ಸುದ್ದಿ/ಗಾಸಿಪ್
Feedback Print Bookmark and Share
 
Chandru
MOKSHA
ಮುಂಗಾರು ಮಳೆ, ಮಳೆ ಬರಲಿ ಮಂಜು ಇರಲಿ, ಮಳೆಯಲಿ ಜೊತೆಯಲಿ... ಹೀಗೆ ಸಾಲು ಸಾಲು ಮಳೆ ಚಿತ್ರಗಳಿಗೆ ಮತ್ತೊಂದು ಮಳೆ ಸೇರ್ಪಡೆಯಾಗಿದೆ. ಅಂದಹಾಗೆ ಈ ಸೇರ್ಪಡೆಗೊಂಡ ಮಳೆಯ ಹೆಸರು ಮಳೆ.

ತಾಜ್‌ಮಹಲ್, ಪ್ರೇಮ್ ಕಹಾನಿ ಚಿತ್ರಗಳ ನಿರ್ದೇಶಕ ಆರ್. ಚಂದ್ರು ಮಳೆಯ ನಿರ್ದೇಶಕರು. ಕುಚ್ ಕುಚ್ ಹೋಗಯಾ ಇದರ ಅಡಿಬರಹ. ಸಂಪೂರ್ಣ ಊಟಿಯಲ್ಲೇ ಮಳೆಯ ಹಿನ್ನೆಲೆಯಲ್ಲಿ ಈ ಚಿತ್ರ ನಡೆಯುತ್ತದೆ. ಕಾಲೇಜು ದಿನಗಳ ತ್ರಿಕೋನ ಪ್ರೇಮಕತೆಯನ್ನು ಚಿತ್ರ ಒಳಗೊಂಡಿದೆ.

ಹೃದಯಾ ಐ ಮಿಸ್ ಯೂ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಸುನೀಲ್ ಈ ಚಿತ್ರದ ನಿರ್ಮಾಪಕರು. ಚಿತ್ರದ ನಾಯಕ- ನಾಯಕಿಯರ ಆಯ್ಕೆ ಇನ್ನು ಆಗಬೇಕಿದೆ. ಪ್ರೇಮ್ ಕಹಾನಿ ಬಿಡುಗಡೆಯಾದ 15 ದಿನಗಳಲ್ಲಿ ಮಳೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ.

ಅಂದಹಾಗೆ, ಪ್ರೇಮ್ ಕಹಾನಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರಕ್ಕಿನ್ನೂ ಸೆನ್ಸಾರ್ ಆಗಿಲ್ಲ. ಚಂದ್ರು ಪ್ರಕಾರ ಇದರ ಬಿಡುಗಡೆ ಅಗಸ್ಟ್ 14ಕ್ಕೆ. ಅಂದರೆ ರಾಜ್ ಬಿಡುಗಡೆಯ ದಿನ ಅಲ್ಲಿಗೆ, ರಾಜ್ ಹಾಗೂ ಪ್ರೇಮಕಹಾನಿ ಜಿದ್ದಾಜಿದ್ದಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಂದ್ರು, ಮಳೆ, ತಾಜ್ಮಹಲ್, ಪ್ರೇಮ್ ಕಹಾನಿ