ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಧೂಳಿನಲ್ಲಿ ಪ್ರಕಾಶ್ ರೈ (Prakash Rai | Dhool | Asish Vidyarthi | Yogesh | Aindritha)
ಸುದ್ದಿ/ಗಾಸಿಪ್
Feedback Print Bookmark and Share
 
Prakash Rai
MOKSHA
ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಕಾಶ್ ರೈ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಯೋಗೀಶ್ ಅಭಿನಯದ ಧೂಳ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರಕಾಶ್ ಮತ್ತೆ ರೀ ಎಂಟ್ರಿ ಪಡೆಯುತ್ತಿದ್ದಾರೆ.

ಇವರನ್ನು ಕನ್ನಡ ಕರೆಸಿದವರು ನಿರ್ದೇಶಕ ಧರಣಿ. ಮುಖ್ಯವಾಗಿ ಧೂಳ್ ಚಿತ್ರ ತಮಿಳಿನ ತಿರುವಿಳೆಯಾಡಲ್ ಆರಂಭಮ್‌ನ ರಿಮೇಕ್.

ಪ್ರಕಾಶ್ ರೈ ಅಲ್ಲಿ ಮಾಡಿದ ಪಾತ್ರವನ್ನು ಇಲ್ಲಿಯೂ ಮಾಡುತ್ತಿದ್ದಾರೆ. ಇದಕ್ಕೂ ಮೊದಲೇ ಕನ್ನಡ ಚಿತ್ರರಂಗಕ್ಕೆ ರೈ ಎಂಟ್ರಿಯಾಗಬೇಕಿತ್ತು. ತೆಲುಗಿನ ಮೆಗಾಹಿಟ್ ಪೋಕರಿ ಕನ್ನಡದಲ್ಲಿ ಪೊರ್ಕಿಯಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ನಟಿಸುತ್ತಾರೆ ಎಂಬ ವದಂತಿಗಳು ಹಬ್ಬಿತ್ತು.

ಆದರೆ ರೈ ಮತ್ತು ಅಶಿಷ್ ವಿದ್ಯಾರ್ಥಿ ಜೊತೆಯಾಗಿ ನಟಿಸಲು ತುಂಬಾ ಸಮಯ ಹಿಡಿಯುತ್ತೆ ಎಂದು ಅನಿವಾರ್ಯವಾಗಿ ಕೈ ಬಿಡಬೇಕಾಯಿತು ಎನ್ನುತ್ತದೆ ಪೊರ್ಕಿ ಚಿತ್ರತಂಡ. ಅದಕ್ಕಾಗಿ ಅಲ್ಲಿ ರೈ ಮಾಡಿದ ಪಾತ್ರವನ್ನು ಅಶಿಷ್ ವಿದ್ಯಾರ್ಥಿ ಮಾಡುತ್ತಿದ್ದಾರೆ. ಅದೇನೇ ಇರಲಿ. ಈಗ ಅಂತೂ ಮತ್ತೆ ಪ್ರಕಾಶ್ ರೈ ಕ್ನಡಕ್ಕೆ ಬರಲು ಕಾಲ ಕೂಡಿ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್ ರೈ, ಧೂಳ್, ಐಂದ್ರಿತಾ ರೇ, ಯೋಗೀಶ್, ಆಶಿಷ್ ವಿದ್ಯಾರ್ಥಿ