ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆನ್ಸಾರ್ ಮುಂದೆ ರಾಜ್; ಆ.14ರಂದು ತೆರೆಗೆ (Raj The Showman | Prem | Puneeth Rajkumar | Nisha Kothari)
ಸುದ್ದಿ/ಗಾಸಿಪ್
Feedback Print Bookmark and Share
 
ಈ ವರ್ಷದ ಬಹು ನೀರೀಕ್ಷಿತ 'ರಾಜ್ ದಿ ಶೋಮ್ಯಾನ್' ಚಿತ್ರದ ಪ್ರಥಮ ಪ್ರತಿ ಹೊರಬಂದಿದ್ದು, ಸೆನ್ಸಾರ್ ವೀಕ್ಷಣೆ ಕಳುಹಿಸಲಾಗಿದೆ. ಅಲ್ಲಿಂದ ಪ್ರಮಾಣ ಪತ್ರ ಬಂದ ಕೂಡಲೇ ಚಿತ್ರ ಬಿಡುಗಡೆಗೆ ದಿನ ಘೋಷಣೆ ಮಾಡುವುದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
Puneeth in Raj
MOKSHA


ಅತ್ತ ಇದೇ ತಿಂಗಳ 14ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿರುವಂತೆ, ಇತ್ತ ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳು ಚಿತ್ರ ಪ್ರದರ್ಶಿಸುವುದಾಗಿ ಜಾಹೀರಾತು ನೀಡಿವೆ.

ಇದೊಂದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರವಾಗಿದ್ದು, ಚಿತ್ರದ ಆಡಿಯೋ ಈಗಾಗಲೇ ದಾಖಲೆ ಮಾರಾಟ ನಡೆಸಿದೆ.

ರಾಜ್ ದಿ ಶೋಮ್ಯಾನ್ ಚಿತ್ರ ಯಶಸ್ಸು ಕಂಡರೆ ಸ್ಯಾಂಡಲ್ವುಡ್ ಮತ್ತೆ ಗರಿಗೆದರಿ ನಿಲ್ಲಲು ಸಾಧ್ಯ ಎನ್ನುವುದು ಗಾಂಧಿನಗರ ಪಂಡಿತರ ವಿಚಾರ. ಎಲ್ಲರ ನಿರೀಕ್ಷೆಗೂ ಮೀರಿ ಚಿತ್ರ ತೆಗೆದಿದ್ದೇವೆ. ಖಂಡಿತ ಚಿತ್ರ ಯಶಸ್ಸು ಗಳಿಸುತ್ತದೆ ಎಂಬ ವಿಶ್ವಾಸ ತಮಗಿದೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್.

ಪುನೀತ್ ರಾಜ್‌ಕುಮಾರ್ ನಾಯಕ ಹಾಗೂ ಬಾಲಿವುಡ್ ಬೆಡಗಿ ನಿಶಾ ಕೊಠಾರಿ ನಾಯಕಿಯಾಗಿರುವ ಈ ಚಿತ್ರದ ಬಜೆಟ್ 10 ಕೋಟಿ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿರೋದ್ರಿಂದ ಚಿತ್ರವೂ ಹಿಟ್ ಆಗುತ್ತೆ ಅನ್ನೋ ನಿರೀಕ್ಷೆ ಚಿತ್ರ ತಂಡದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜ್ ದಿ ಶೋಮ್ಯಾನ್, ಪ್ರೇಮ್, ಪುನೀತ್ ರಾಜ್ಕುಮಾರ್, ನಿಶಾ ಕೊಠಾರಿ, ಕನ್ನಡ ಸಿನಿಮಾ