ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಂಠೀರವ ಸ್ಟುಡಿಯೋದಿಂದ 200 ಚಿತ್ರ ಮಂದಿರ ನಿರ್ಮಾಣ (Kanteerava Studio | theatre | Karnataka | Girish Mattannavar)
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಸಿನಿಮಾಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಖಾಸಗಿ ವಲಯ ಮತ್ತು ಉದ್ಯಮದ ಪಾಲುದಾರಿಕೆಯೊಂದಿಗೆ ರಾಜ್ಯದಾದ್ಯಂತ 150 ಸಿನಿಮಾ ಮಂದಿರಗಳನ್ನು ನಿರ್ಮಿಸಲು ಕಂಠೀರವ ಸ್ಟುಡಿಯೋ ಮುಂದೆ ಬಂದಿದೆ.

ಕಂಠೀರವ ಸ್ಟುಡಿಯೋ ಅಧ್ಯಕ್ಷ ಗಿರೀಶ್ ಮಟ್ಟೆನ್ನವರ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, 'ಬಿ' ಮತ್ತು 'ಸಿ' ಸಿನಿಮಾ ಥಿಯೇಟರ್‌ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದರ ಅಂದಾಜು ವೆಚ್ಚ ಸುಮಾರು 200 ಕೋಟಿ ರೂಪಾಯಿಗಳು.
Girish Mattennavar
MOKSHA

'ಬಿ' ಸೆಂಟರ್ ಎಂದರೆ ತಾಲೂಕು ವಲಯಗಳು ಹಾಗೂ 'ಸಿ' ಕೇಂದ್ರಗಳೆಂದರೆ ತಾಲೂಕಿಗಿಂತ ಚಿಕ್ಕದಾಗಿರುವ ಹೋಬಳಿಗಳು.

ಚಿತ್ರ ಮಂದಿರ ನಿರ್ಮಾಣ ಬಗ್ಗೆ ಖಾಸಗಿ ಕ್ಷೇತ್ರವು ಹೆಚ್ಚಿನ ಆಸಕ್ತಿ ವಹಿಸಿವೆ ಎಂದಿರುವ ಗಿರೀಶ್, ಕನ್ನಡ ಸಿನಿಮಾ ಉದ್ಯಮದ ಪ್ರಮುಖರತ್ತ ಸ್ಟುಡಿಯೋ ಎದುರು ನೋಡುತ್ತಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿರುವಂತೆ ಶಾಪಿಂಗ್ ಕಾಂಪ್ಲೆಕ್ಸ್, ಸಭಾಂಗಣ, ಮಾಲ್‌ಗಳನ್ನೊಳಗೊಂಡ ಸಿನಿಮಾ ಥಿಯೇಟರ್‌ಗಳನ್ನು 'ಬಿ' ಮತ್ತು 'ಸಿ' ಕೇಂದ್ರಗಳಲ್ಲೂ ನಿರ್ಮಿಸುವ ಮೂಲಕ ಜನರಿಗೆ ಬಹುಪಯೋಗಿಯನ್ನಾಗಿಸುವ ಗುರಿ ಸ್ಟುಡಿಯೋದ ಮುಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಿನಿಮಾ ಥಿಯೇಟರುಗಳಿಲ್ಲದ ಅಥವಾ ಉತ್ತಮ ಸ್ಥಿತಿಯಲ್ಲಿಲ್ಲದ ಕಾರಣ ಜನ ಮನೆಯಲ್ಲೇ ನಕಲಿ ಸೀಡಿಗಳಿಂದ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅಲ್ಲೆಲ್ಲ ಉತ್ತಮ ಸಿನಿಮಾ ಮಂದಿರದ ವ್ಯವಸ್ಥೆಯನ್ನು ಮಾಡಿದರೆ ಖಂಡಿತಾ ಅವರು ಥಿಯೇಟರಿನತ್ತ ಬರುತ್ತಾರೆ ಎಂದು ಮಟ್ಟೆನ್ನವರ್ ವಿವರಿಸಿದ್ದಾರೆ.

ಟ್ರಾಫಿಕ್ ಜಂಕ್ಷನ್, ಮಧ್ಯಮ ವರ್ಗದ ಮನೆಗಳು, ದಾಬಾ, ಟೀ ಶಾಪ್, ಬಾರ್ ಮತ್ತು ರೆಸ್ಟೋರೆಂಟ್‌ ಸೇರಿದಂತೆ ಶೂಟಿಂಗ್‌ಗೆ ಅಗತ್ಯವಿರುವ ಬಹುತೇಕ ವ್ಯವಸ್ಥೆಗಳನ್ನು 12.4 ಎಕರೆ ಪ್ರದೇಶದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಂಠೀರವ ಸ್ಟುಡಿಯೋ, ಕರ್ನಾಟಕ, ಸಿನಿಮಾ, ಗಿರೀಶ್ ಮಟ್ಟೆನ್ನವರ್, ಕನ್ನಡ ಸಿನಿಮಾ