ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಂಧಿನಗರಕ್ಕೆ ಪೊಗರು! (Dattaraj | Pogaru | Tagaru | Vinod Prabhakar)
ಸುದ್ದಿ/ಗಾಸಿಪ್
Feedback Print Bookmark and Share
 
ವಿನೋದ್ ಪ್ರಭಾಕರ್ ಟಗರು ಆಗಿದ್ದು ಈಗ ಹಳೇ ಸುದ್ದಿ. ಆದರೆ ಇತ್ತ ಮತ್ತೊಬ್ಬರು ಪೊಗರು ತೋರಿಸಲು ಹೊರಟಿದ್ದಾರೆ. ಅಂದರೆ ಪೊಗರು ಹೆಸರಿನ ಚಿತ್ರವೊಂದು ಸೆಟ್ಟೇರಲಿದೆ. ಆ ಮೂಲಕ ಒಟ್ಟಾರೆ ಈಗ ಗಾಂಧಿನಗರದಲ್ಲೆಲ್ಲ, ಟಗರು, ಪೊಗರು, ಪೊರ್ಕಿ... ಇವಿಷ್ಟೇ ತುಂಬಿಕೊಳ್ಳೋದೇ ಕಾಣಿಸುತ್ತಿದೆ.

ಚಿತ್ರಕ್ಕೆ ದತ್ತರಾಜ್ ಕೃಪಾಲಯ ನಾಯಕ. ಈ ಮೊದಲು ರಾಣಿ ರತ್ನಮಾಲಾ ಚಿತ್ರದ ನಾಯಕ ನಟನಾಗಿದ್ದರು. ಆ ಚಿತ್ರವಿನ್ನೂ ಬಿಡುಗಡೆಗೊಂಡಿಲ್ಲ. ಪೊಗರು ಚಿತ್ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಸೆಟ್ಟೇರಲಿದೆ. ಚಿತ್ರವನ್ನು ವಿ. ನಾಗರತ್ನ ವಿ. ಚಾರಿ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಎ.ಎನ್. ಜಯರಾಮಯ್ಯ ವಹಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಾಯಿ ಗುರುನಾಥ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕಲಾತಪಸ್ವಿ ರಾಜೇಶ್, ಅನಂತ್, ತನು, ಚಂದ್ರಕಲಾ ಶೈಲಶ್ರೀ, ಮೊದಲಾದವರು ತಾರಾಬಳಗದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೊಗರು, ಕೃಪಾಲಯ, ವಿನೋದ್ ಪ್ರಭಾಕರ್, ಟಗರು, ದತ್ತರಾಜ್