ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗಿಗೆ ಹಾಡಿದ ಎ.ಆರ್.ರೆಹಮಾನ್ ಸೋದರಿ (Yogi | A R Rehman | Rehan | K Manju | Yogesh)
ಸುದ್ದಿ/ಗಾಸಿಪ್
Feedback Print Bookmark and Share
 
Yogesh, Biyanka Desai
MOKSHA
ಯೋಗಿ ಚಿತ್ರ ದಿನಕ್ಕೊಂದು ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಯೋಗೀಶ್ ಹಾಡುವ ಮೂಲಕ ಸುದ್ದಿ ಮಾಡಿದ್ದರು. ಅಷ್ಟೇ ಅಲ್ಲ ಇವರೊಂದಿಗೆ ಎ.ಆರ್. ರೆಹಮಾನ್ ಸಹೋದರಿ ರೆಹಾನ್ ಕೂಡಾ ಹಾಡಿದ್ದಾರೆ ಎಂಬ ಸುದ್ದಿ ಬಂದಿದೆ.

ಈ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ. ಚಿತ್ರಕ್ಕೆ ಜಿಂಕೆ ಮರೀನಾ ಖ್ಯಾತಿಯ ಎಮಿಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ಅದ್ದೂರಿಯಾಗಿ ಮಾಡಿದ್ದಾರಂತೆ ನಿರ್ಮಾಪಕ ಕೆ. ಮಂಜು. ನಿರ್ದೇಶಕ ಉದಯ ಪ್ರಕಾಶ್ ಹೇಳಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಖರ್ಚು ಮಾಡಲಾಗಿದೆ. ಇದೀಗ ಎರಡೂವರೆ ಕೋಟಿ ದಾಟಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಈ ಚಿತ್ರದ ಕಥಾವಸ್ತು. ಅದಕ್ಕಾಗಿ ಚಿತ್ರದ ಟ್ಯಾಗ್‌ಲೈನ್ ಆಗಿ ಅಪ್ಪು ಫ್ಯಾನ್ ಎಂದು ಸೇರಿಸಲಾಗಿದೆ. ಇದರಿಂದ ಈ ರೀತಿ ಪುನೀತ್ ಅಭಿಮಾನಿ ವರ್ಗ ಹಾಗೂ ಯೋಗೀಶ್ ಅಭಿಮಾನಿ ವರ್ಗ ಎಂಬ ಎರಡೂ ವರ್ಗವನ್ನು ಸೆಳೆಯುವ ಯೋಚನೆ ನಿರ್ದೇಶಕ ಉದಯ್ ಪ್ರಕಾಶ್‌ರದ್ದು. ಚಿತ್ರದಲ್ಲಿ ಶಿರಿನ್, ಬಿಯಾಂಕಾ ದೇಸಾಯಿ ಇದ್ದಾರೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗೀಶ್, ಎಆರ್ರೆಹಮಾನ್, ರೆಹಾನ್, ಕೆ ಮಂಜು, ಯೋಗಿ, ಬಿಯಾಂಕಾ ದೇಸಾಯಿ