ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರರ ಸೂಪರ್ ವೆಚ್ಚ 18 ಕೋಟಿ! (Upendra | Super | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
PR
ನಿರ್ದೇಶಿಸುತ್ತೇನೆ ಅಂತ ಬೀದಿಬೀದಿಗಳಲ್ಲಿ ಬ್ಯಾನರ್ ಹಾರಿಸಿ ಅಭಿಮಾನಿಗಳಲ್ಲಿ ಕುತೂಹಲದ ಅಲೆಯನ್ನೇ ಸೃಷ್ಟಿಸಿ ಕೈಕಟ್ಟಿ ಕುಳಿತಿರುವ ಉಪೇಂದ್ರ, ತಾವು ನಿರ್ದೇಶಿಸುತ್ತಿರುವ ಹೆಸರಿಲ್ಲದ ಕೈ ಸಂಕೇತದ ಸೂಪರ್ ಅರ್ಥ ಧ್ವನಿಸುವ ಚಿತ್ರಕ್ಕೆ ಬರೋಬ್ಬರಿ 18 ಕೋಟಿ ರುಪಾಯಿ ವೆಚ್ಚ ಮಾಡಲಿದ್ದಾರಂತೆ. ಹಾಗಂತ ಅವರೇ ಹೇಳಿದ್ದಾರೆ ಕೂಡಾ. ಅಷ್ಟೇ ಅಲ್ಲ, ಈ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 2.3 ಕೋಟಿ ರೂಪಾಯಿಗಳಿಗೆ ಮಾರಾಟವೂ ಆಗಿದೆಯಂತೆ. ಜತೆಗೆ ಇದರಲ್ಲಿ ಬಾಲಿವುಡ್ ನಟರೊಬ್ಬರೂ ನಟಿಸುತ್ತಿದ್ದಾರಂತೆ. ಉಪೇಂದ್ರರದ್ದೇ ಸಂಗೀತ ನಿರ್ದೇಶನವೂ ಇದೆಯಂತೆ ಈ ಚಿತ್ರಕ್ಕೆ!!!

...!!! ಹೀಗೆ ಅಂತೆ ಕಂತೆಗಳ ಸಂತೆ ಗಾಂಧಿನಗರದೆಲ್ಲೆಡೆ ಹರಿಯುತ್ತಿದೆ. ಉಪೇಂದ್ರ ಕೈಕಟ್ಟಿಕೊಂಡು ಕೂರುತ್ತಾರೆ. ತಾವು ನಿರ್ದೇಶಿಸುತ್ತಿರುವ ಕೈಗುರುತಿನ ಸಂಕೇತದ ಚಿತ್ರದ ಅರ್ಥವೇನು ಎಂದರೆ, ಅದು ನೋಡುಗರ ಅಭಿವ್ಯಕ್ತಿಗೆ ಬಿಟ್ಟದ್ದು. ಚಿತ್ರದ ಈ ಚಿಹ್ನೆಗೆ ನಾನು ಅರ್ಥ ಕೊಡೊದಿಲ್ಲ. ಒಬ್ಬೊಬ್ಬರು ಒಂದೊಂದು ಅರ್ಥ ಹುಡುಕಿದ್ದಾರೆ. ಹುಡುಕಲಿ. ಇದು ಬೇರೆ ಬೇರೆ ಆಯಾಮ ನೀಡುತ್ತೆ ಎನ್ನುತ್ತಾರೆ ಅವರು.

ಹೆಬ್ಬೆರಳು, ತೋರಬೆರಳು ಜೋಡಿಸಿಕೊಂಡು ಉಳಿದ ಬೆರಳುಗಳು ಬಿಡಿಸಿಕೊಂಡಿರುವ ಈ ಚಿಹ್ನೆಯನ್ನು ಹಲವರು ಸೂಪರ್ ಎಂದು ಅರ್ಥೈಸಿಕೊಂಡರು. ಇನ್ನೂ ಕೆಲವರು ಸಕತ್ ಎಂದರು. ಮತ್ತೊಬ್ಬರು ಪ್ರೇಮ- ಪ್ರೀತಿ ಅಂದರು. ಇನ್ನೂ ಕೆಲವರು ಇದು ಜ್ಞಾನ ಮುದ್ರೆ, ಯೋಗಮುದ್ರೆ ಎಂದೆಲ್ಲಾ ವಿವರಿಸಿದರು. ಒಟ್ಟಾರೆ ಚಿತ್ರವೊಂದು ಹಲವು ಅರ್ಥ. ಇದೇ ಕುತೂಹಲಕ್ಕೆ ತಕ್ಕಂತೆ ಉಪ್ಪಿ ತಮ್ಮ ಉಪ್ಪಿನ ರುಚಿ ತೋರಿಸುತ್ತಾರೋ ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಸೂಪರ್, ಕನ್ನಡ ಸಿನಿಮಾ