ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಣೇನ ಉಲ್ಲಾಸಕ್ಕೆ ಪುನೀತ್‌ರ ಉತ್ಸಾಹ! (Ullasa Uthsaha | Puneeth | Ganesh)
ಸುದ್ದಿ/ಗಾಸಿಪ್
Feedback Print Bookmark and Share
 
Ullasa Uthsaha
MOKSHA
ಅದು ಉಲ್ಲಾಸ ಉತ್ಸಾಹದ ಚಿತ್ರದ ಕೆಸೆಟ್ ಮತ್ತು ಸಿಡಿಗಳ ಬಿಡುಗಡೆ ಕಾರ್ಯಕ್ರಮ. ಅಲ್ಲಿಗೆ ಪುನೀತ್ ರಾಜ್‌ಕುಮಾರ್ ಬಂದು ಬಿಡುಗಡೆ ಮಾಡಿದರು. ಆದರೆ ಈ ವಿಷಯ ಸ್ವತಃ ಚಿತ್ರದ ನಾಯಕನಾಗಿರುವ ಗಣೇಶ್‌ಗೆ ತಿಳಿದಿರಲಿಲ್ಲವಂತೆ!

ನನಗೆ ಈ ಬಗ್ಗೆ ಮುಂಚೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ನಂತರವಷ್ಟೇ ಗೊತ್ತಾಗಿದ್ದು. ನನಗೆ ತುಂಬ ಆಶ್ಚರ್ಯವಾಗುತ್ತಿದೆ. ಈ ಚಿತ್ರದಲ್ಲಿ ಉಲ್ಲಾಸ, ಉತ್ಸಾಹ ಎರಡೂ ಇರುತ್ತದೆ. ಇದು ತೆಲುಗಿನಲ್ಲಿ ಚೆನ್ನಾಗಿ ಮಾಡಿದ್ದಾರೆ. ಅದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಕನ್ನಡ ಚಿತ್ರ ಎನ್ನುತ್ತಾರೆ ಗಣೇಶ್.

ಇದೊಂದು ಪಕ್ಕಾ ಕೌಟುಂಬಿಕ ಹಾಗೂ ಕಾಮಿಡಿ ಚಿತ್ರ ಎಂದೆನಿಸಬಹುದು. ಇಲ್ಲಿನ ಹಾಡುಗಳು ತುಂಬಾ ಇಷ್ಟವಾಗುತ್ತದೆ. ಈ ಚಿತ್ರ ಖಂಡಿತಾ ಗೆಲ್ಲುತ್ತದೆ ಎನ್ನುವುದು ಪುನೀತ್ ಆಶಯ. ಏನೇ ಆಗಲಿ, ಚಿತ್ರವನ್ನು ಚೆನ್ನಾಗಿ ಮೂಡಿ ಬಂದಲ್ಲಿ ನಾಯಕನ ನಟ ಗಣೇಶ್ ಜೊತೆಯಲ್ಲಿ ನಿರ್ದೇಶಕ ದೇವರಾಜ್ ಪಾಲನ್ ಹಾಗೂ ಛಾಯಾಗ್ರಾಹಕ ಸೀತಾರಾಂರವರ ಕೈ ಚಳಕ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಲ್ಲಾಸ ಉತ್ಸಾಹ, ಪುನೀತ್, ಗಣೇಶ್