ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೆನಿಫರ್ ಕೋತ್ವಾಲ್ ಮತ್ತೆ ಮುಂಬೈಗೆ ಮರಳಿದಳೇ? (Jennifer Kotwal | Jogi | Masth Maja Maadi | Bisile)
ಸುದ್ದಿ/ಗಾಸಿಪ್
Feedback Print Bookmark and Share
 
Himesh Reshamiya, Jennifer Kotwal
IFM
ಚುಕುಬುಕು ರೈಲು, ನಿಲ್ಲೋದಿಲ್ಲ ಎಲ್ಲು, ಯಾಕಿಂಗೆ ಓಡ್ತೈತೋ... ಎಂದು ಜೋಗಿಯಲ್ಲಿ ಕುಣಿದು ಕುಪ್ಪಳಿಸಿ ಅಬಾಲವೃದ್ಧರಾದಿಯಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದ ಕನ್ನಡದ ಮುಂಬೈ ಬೆಡಗಿ ಜೆನಿಫರ್ ಕೋತ್ವಾಲ್ ಇತ್ತೀಚೆಗೆ ಗಾಂಧಿನಗರದಲ್ಲಿ ಕಾಣಿಸಿಕೊಳ್ಳದೆ ತುಂಬ ಸಮಯವಾಯಿತು. ಮುಂಬೈ ಮಾಡೆಲಿಂಗ್ ಪ್ರಪಂಚದಲ್ಲಿ ಹೆಸರು ಮಾಡಿ ಹಾಯಾಗಿದ್ದ ಜೆನಿಫರ್‌ಳನ್ನು ಪ್ರೇಮ್ ಕಣ್ಣಿಗೆ ಬಿದ್ದು, ಜೋಗಿಯಲ್ಲಿ ನಟಿಸಲು ಕನ್ನಡಕ್ಕೆ ಕರೆತಂದ ಮೇಲೆ ಮಸ್ತ್ ಮಜಾ ಮಾಡಿ ಚಿತ್ರದ ನಂತರ ಬಹುತೇಕ ಜೆನಿಫರ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.

Jennifer Kotwal
IFM
ಇದೀಗ ಬಂದ ಸುದ್ದಿಯೇನೆಂದರೆ, ಶ್ರೀ, ಯುಗಾದಿ, ಸತ್ಯವಾನ್ ಸಾವಿತ್ರಿ, ಜೋಗಿ, ಲವಕುಶ, ಸ್ನೇಹಾನಾ ಪ್ರೀತಿನಾ, ಈ ಬಂಧನ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ ಜೆನಿಫರ್ ಈಗ ಕನ್ನಡ ಬಿಟ್ಟು ಮತ್ತೆ ಹಿಂದಿಗೆ ಮರಳಿದ್ದಾಳಂತೆ. ಈಗ ಈಕೆ ಹಿಮೇಶ್ ರೇಷಮಿಯಾ ಜತೆಗಿನ ಮುಡ್ ಮುಡ್ ಕೇ ನಾ ದೇಖ್ ಚಿತ್ರದಲ್ಲಿ ಬ್ಯುಸಿ. ಚಿತ್ರೀಕರಣವೂ ಪೂರ್ಣಗೊಂಡಿದೆಯಂತೆ.

ಅಂದಹಾಗೆ, ಜೆನಿಫರ್‌ ಕೋತ್ವಾಲ್‌ಳ ಇನ್ನೂ ಒಂದು ಚಿತ್ರ ತೆರೆ ಕಾಣಲು ಬಾಕಿಯಿದೆ. ಅದು ದಿಗಂತ್ ಜತೆಗಿನ ಬಿಸಿಲೇ ಚಿತ್ರ. ಚಿತ್ರದ ಬಗ್ಗೆ ಜೆನಿಫರ್‌ಗೆ ಅಪಾರ ನಿರೀಕ್ಷೆಯಿದೆಯಂತೆ. ಬಿಸಿಲೇ ಚಿತ್ರ ಎಲ್ಲ ಚಿತ್ರಗಳ ಹಾಗಲ್ಲ. ಚಿತ್ರದ ತುಂಬ ತಮಾಷೆಯಿದೆ. ಅದ್ಭುತವೆನಿಸುವ ಲವ್ ಇದೆ. ಕಾಡಿನೊಳಗೇ ಶೂಟಿಂಗ್ ನಡೆದಿರುವುದರಿಂದ ಚಿತ್ರದ ತುಂಬ ಪ್ರಕೃತಿಯ ರಮಣೀಯತೆಯಿದೆ. ಕಾಡುಗಳಲ್ಲಿನ ಅನುಭವ ತುಂಬ ಚೆನ್ನಾಗಿತ್ತು. ಅಲ್ಲದೆ, ಹಿರಿಯ ನಟ ದ್ವಾರಕೀಶ್ ಜತೆಗೆ ಈ ಚಿತ್ರದಲ್ಲಿ ನಟಿಸಿದ್ದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಚಿತ್ರದ ಹಾಡುಗಳನ್ನು ತುಂಬ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಇದು ಪ್ರೇಕ್ಷಕರಿಗೆ ತುಂಬ ಇಷ್ಟವಾಗಲಿದೆ ಎನ್ನುತ್ತಾರೆ ಜೆನಿಫರ್.

Jennifer Kotwal
IFM
ಆದರೆ, ಜೆನಿಫರ್ ಮುಂಬೈಗೆ ಮರಳಿ ಹೋಗಿದ್ದರಿಂದಲೋ ಏನೋ, ಕೆಲವು ಉತ್ತಮ ಅವಕಾಶಗಳನ್ನೂ ಕಳೆದುಕೊಂಡಿದ್ದಾರೆ. ಅನಂತರಾಜು ನಿರ್ದೇಶನದ ಮುರಳಿ ಮೋಹನ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಜೆನಿಫರ್ ಕೈತಪ್ಪಿದೆ. ಜೆನಿಫರ್ ಅವಕಾಶ ಶರ್ಮಿಳಾ ಮಾಂಡ್ರೆಯ ಪಾಲಾದ ಸುದ್ದಿಯೂ ಕೇಳಿಬಂದಿದೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ಸೆ.6ರಿಂದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಜೆನಿಫರ್ ಅಭಿನಯದ ಇನ್ನೊಂದು ಚಿತ್ರ ಓ ಮನಸೇ ನಿರ್ಮಾಪಕರ ತೊಂದರೆಯಿಂದ ಮೇಲೇಳುವ ಲಕ್ಷಣ ಕಾಣುತ್ತಿಲ್ಲ.

ಜೆನಿಫರ್ ಅಭಿನಯದ ಕಳೆದ ವರ್ಷದ ಜನಪ್ರಿಯ ಕಾಮಿಡಿ ಚಿತ್ರ ಮಸ್ತ್ ಮಜಾ ಮಾಡಿಯ ಭಾಗ 2ನ್ನು ತರಲು ಸೌಂದರ್ಯ ಜಗದೀಶ್ ಅಣಿಯಾಗುತ್ತಿದ್ದಾರಂತೆ. ಈಗಾಗಲೇ ಕೋಮಲ್, ವಿಜಯ ರಾಘವೇಂದ್ರ, ದಿಗಂತ್ ಅವರನ್ನು ಅಂತಿಮಗೊಳಿಸಿದ್ದೂ ಆಗಿದೆಯಂತೆ. ಮಸ್ತ್ ಮಜಾ ಮಾಡಿ ಚತ್ರದಲ್ಲಿ ಇದ್ದ ಸುದೀಪ್ ಅವರನ್ನೇ ಮತ್ತೆ ಭಾಗ 2ರಲ್ಲೂ ಆಯ್ಕೆ ಮಾಡಬೇಕೆಂದು ಸೌಂದರ್ಯ ಜಗದೀಶ್ ಪ್ರಯತ್ನಿಸಿದ್ದರೂ, ಸುದೀಪ್ ಅವರು ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ನಿರ್ದೇಶನ, ನಟನೆ ಎಂದು ಬ್ಯುಸಿಯಾಗಿರುವ ಕಾರಣ, ಈ ಅವಕಾಶ ದಿಗಂತ್ ಪಾಲಾಗಿದೆಯಂತೆ. ಆದರೆ ಇದರಲ್ಲಿ ಮತ್ತೆ ಜೆನಿಫರ್‌ಗೆ ಅವಕಾಶ ಸಿಗುತ್ತೋ ಇಲ್ಲವೋ ಎಂಬುದು ಮಾತ್ರ ಇನ್ನೂ ಖಚಿತಗೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆನಿಫರ್ ಕೋತ್ವಾಲ್, ಜೋಗಿ, ಮಸ್ತ್ ಮಜಾ ಮಾಡಿ, ಬಿಸಿಲೇ