ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 20 ಕೆಜಿ ತೂಕ ಇಳಿಸಿಕೊಂಡ ವಿಜಯ್ ರಾಘವೇಂದ್ರ (Vijay Raghavendra | IPC Section 300 | Minchina Ota)
ಸುದ್ದಿ/ಗಾಸಿಪ್
Feedback Print Bookmark and Share
 
Vijay Raghavendra
MOKSHA
ಬಾಲಿವುಡ್ ನಾಯಕ, ನಾಯಕಿಯರು ಪಾತ್ರಕ್ಕಾಗಿ ತೂಕ ಇಳಿಸುವುದು, ಹೆಚ್ಚಿಸಿಕೊಳ್ಳುವುದು ಕೇಳಿದ್ದೇವೆ. ಈ ಪ್ರಯತ್ನಕ್ಕೆ ಸ್ಯಾಂಡಲ್‌ವುಡ್ ಹೀರೋಗಳು ಕೈ ಹಾಕುವುದು ಕಡಿಮೆ. ಆದರೆ ನಟ ವಿಜಯ್ ರಾಘವೇಂದ್ರ ಇದೀಗ ಐಪಿಸಿ ಸೆಕ್ಷನ್ 300 ಚಿತ್ರದ ಅಭಿನಯಕ್ಕಾಗಿ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಅಂಡ್ ಟ್ರಿಮ್ ಆಗಿ ಬದಲಾಗಿದ್ದಾರೆ.

ಇದಕ್ಕಾಗಿ ಯಾವುದೇ ಜಿಮ್‌ಗೆ ಹೋಗಿಲ್ಲ. ಬದಲಾಗಿ ಮನೆಯಲ್ಲಿಯೇ ತಿಂಡಿ, ತೀರ್ಥಕ್ಕೆ ಕಡಿವಾಣ ಹಾಕಿ ಸ್ಲಿಮ್ ಆಗಿದ್ದಾರಂತೆ ವಿಜಯ್ ರಾಘವೇಂದ್ರ. ಪಾತ್ರಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧ. ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹೇರ್‌ಸ್ಟೈಲ್ ಬದಲಿಸಿದ್ದೇನೆ. ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್ ಮಾಡಿಸಿಕೊಂಡಿದ್ದೇನೆ ಎನ್ನುತ್ತಾರೆ ಅವರು.

ಅಷ್ಟೇ ಅಲ್ಲ, ರೀಲ್ ಮೇಲೆ ರಿಯಲ್ ಲಾಯರ್ ಆಗುವುದಕ್ಕಾಗಿ ಹಲವಾರು ವಕೀಲರನ್ನು ಭೇಟಿ ಮಾಡಿದ್ದಾರೆ. ಕೋರ್ಟ್‌ನಲ್ಲಿ ಹೇಗೆ ಕುಳಿತುಕೊಳ್ಳಬೇಕು, ಹೇಗೆ ವಾದಿಸಬೇಕು ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾನೂನು ಪುಸ್ತಕಗಳನ್ನು ಓದಿದ್ದಾರೆ. ಯಾವ ಸಿನಿಮಾಗಳು ಕೂಡ ಅವರ ಕೈ ಹಿಡಿದಿಲ್ಲ. ಮಿಂಚಿನ ಓಟ ಕೂಡ ಮರೀಚಿಕೆಯಾಗಿದೆ. ಇದೀಗ ಗೆಲುವಿನ ಬೆನ್ನು ಹತ್ತಿರುವ ವಿಜಯ್ ರಾಘವೇಂದ್ರ ಸಾಕಷ್ಟು ಸಿದ್ಧತೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್ ರಾಘವೇಂದ್ರ, ಐಪಿಸಿ ಸೆಕ್ಷನ್ 300, ಮಿಂಚಿನ ಓಟ