ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪೃಥ್ವಿ'ಯಲ್ಲಿ ಪುನೀತ್‌ರ ಅಲ್ಟಿಮೇಟ್ ಪವರ್! (Pruthvi | Puneeth | Jacob | Savaari)
ಸುದ್ದಿ/ಗಾಸಿಪ್
Feedback Print Bookmark and Share
 
Puneeth
MOKSHA
ಪುನೀತ್ ರಾಜ್‌ಕುಮಾರ್ ಈಗ ಮತ್ತೊಂದು ಚಿತ್ರದ ಮೂಲಕ ತನ್ನ ಪವರ್ ತೋರಿಸಲಿದ್ದಾರೆ. ಪೃಥ್ವಿ- ದಿ ಅಲ್ಟಿಮೇಟ್ ಪವರ್ ಎಂಬ ಈ ಚಿತ್ರವನ್ನು ಸವಾರಿ ಚಿತ್ರದ ನಿರ್ದೇಶಕ ಜಾಕೋಬ್ ವರ್ಗೀಸ್ ನಿರ್ದೇಶಿಸಲಿದ್ದಾರೆ.

ಸವಾರಿ ಚಿತ್ರ ಶತದಿನೋತ್ಸವ ಆಚರಿಸಿದ್ದೇ ತಡ ಜಾಕೋಬ್‌ಗೆ ಈಗ ಪುನೀತ್ ಚಿತ್ರವನ್ನು ನಿರ್ದೇಶಿಸುವ ಅವಕಾಶ ದಕ್ಕಿದೆ. ಜಾಕೋಬ್ ಕೂಡಾ ಅಷ್ಟೇ ಉತ್ಸಾಹದಿಂದ ಪುನೀತ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಬಂಧುಬಳಗ ಎಂಬ ಚಿತ್ರ ನಿರ್ಮಿಸಿದ್ದ ಸೂರಪ್ಪ ಬಾಬು ಈ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ಈಗ ಪುನೀತ್ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ರಾಮ್ ಚಿತ್ರ ಅರ್ಧ ಚಿತ್ರೀಕರಣ ಮುಗಿಸಿದೆ. ಪೃಥ್ವಿ ಚಿತ್ರದ ನಂತರ ದುನಿಯಾ ಖ್ಯಾತಿಯ ಸೂರಿ ನಿರ್ದೇಶನದ ಚಿತ್ರ ಸೆಟ್ಟೇರುವ ಲಕ್ಷಣಗಳಿವೆ. ನಂತರ ಪುನೀತ್ ಸ್ವತಃ ನಿರ್ಮಿಸುತ್ತಿರುವ ತಮಿಳಿನ ನಾಡೋಡಿಗಳ್ ಚಿತ್ರದ ಕನ್ನಡ ರಿಮೇಕ್ ಆರಂಭಗೊಳ್ಳಲಿದೆ. ಒಟ್ಟಾರೆ ಪುನೀತ್ ಕೂಡಾ ತುಂಬಾ ಬ್ಯುಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೃಥ್ವಿ, ಪುನೀತ್ ರಾಜ್ಕುಮಾರ್, ಜಾಕೋಬ್ ವರ್ಗೀಸ್, ಸವಾರಿ