ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂತರ್ಜಾಲದ ಅಭಿಮಾನಿಗಳಿಗೆ ರಮ್ಯಾಳ ಬರ್ತ್‌ಡೇ ಪಾರ್ಟಿ! (Divya Spandana | Ramya | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Ramya
MOKSHA
ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಾದ ಟ್ವಿಟರ್, ಫೇಸ್ ಬುಕ್‌ಗಳಲ್ಲಿ ಬಾಲಿವುಡ್ ನಟ, ನಟಿಯರು ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರೋದು ಬಹಳಷ್ಟು ಮಂದಿಗೆ ಗೊತ್ತು. ಸಾವಿರಾರು ಮಂದಿ ಅಂತರ್ಜಾಲ ಅಭಿಮಾನಿಗಳನ್ನೂ ನಟನಟಿಯರು ಹೊಂದಿದ್ದಾರೆ. ಈ ಸಾಲಿಗೀಗ ಕ್ನಡದ ರಮ್ಯಾ ಕೂಡಾ ಸೇರಿದ್ದಾಳೆ.

ಹೌದು. ರಮ್ಯಾ ಅಂತರ್ಜಾಲ ಮೋಹಿಯಂತೆ. ಬಿಡುವಿನ ವೇಳೆ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟು ಕುಟ್ಟುತ್ತಾ ಕೂರುವ ಜಾಣೆಯೀಕೆ. ಬ್ಲಾಗ್ ಬರೆಯೋದು, ಅಭಿಮಾನಿಗಳ ಜತೆಗೆ ಅಂತರ್ಜಾಲದಲ್ಲಿ ಉತ್ತಮ ಸಂಪರ್ಕ ಹೊಂದಿರುವುದು, ಅದನ್ನ ಮುಂದುವರಿಸೋದು ಎಲ್ಲಾ ರಮ್ಯಾಗೆ ಗೊತ್ತು. ಆಕೆಗೀಗಾಗಲೇ ಅಂತರ್ಜಾಲದಲ್ಲಿ ನಾಲ್ಕು ಸಾವಿರ ಅಭಿಮಾನಿಗಳಿದ್ದಾರೆ.

ಈಗ ಈ ವಿಷಯ ಯಾಕಪ್ಪಾ ಅಂದ್ರೆ, ರಮ್ಯಾ ಈಗ ತನ್ನ ಅಭಿಮಾನಿಗಳಿಗೆ ತನ್ನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾಳೆ. ನವೆಂಬರ್ 29ಕ್ಕೆ ರಮ್ಯಾಗೆ ಬರ್ತ್‌ಡೇ. ಅಲ್ಲಿಗೆ ರಮ್ಯಾಗೆ 28 ವಯಸ್ಸು ತುಂಬುತ್ತದೆ. ಆ ಸಂಭ್ರಮದ ದಿನದಂದು ಪಾಲ್ಗೊಳ್ಳಲು ರಮ್ಯಾ 50 ಅದೃಷ್ಟ ಅಭಿಮಾನಿಗಳಿಗೆ ಉಚಿತ ಆಹ್ವಾನ ನೀಡುತ್ತಿದ್ದಾರೆ. 4000 ಅಭಿಮಾನಿಗಳ ಪೈಕಿಯಿಂದ ಅದೃಷ್ಟ ಹೊಂದಿರುವ 50 ಮಂದಿಯನ್ನು ಆಯ್ಕೆ ಮಾಡಿ ಸ್ವತಃ ರಮ್ಯಾರೇ ಆ ಅಭಿಮಾನಿಗಳಿಗೆ ತನ್ನ ಹುಟ್ಟುಹಬ್ಬಕ್ಕೆ ಆಹ್ವಾನಿಸಲಿದ್ದಾರೆ. ಹಾಗೆಂದು ಆಹ್ವಾನ ಪಡೆಯದ ದುರಾದೃಷ್ಟವಂತರು ಬೇಸರಿಸಬೇಕಿಲ್ಲ. ಮುಂದಿನ ವರ್ಷಗಳಲ್ಲಿ ಇಂಥವರ ಅದೃಷ್ಟ ಖುಲಾಯಿಸಬಹುದು. ಕಾದು ನೋಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ದಿವ್ಯ ಸ್ಪಂದನಾ, ಕನ್ನಡ ಸಿನಿಮಾ