ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಲ್ದಾರ ತೆರೆಗೆ ಅಪ್ಪಳಿಸಲಿದ್ದಾನೆ! (Dildar | Aman | Amar)
ಸುದ್ದಿ/ಗಾಸಿಪ್
Feedback Print Bookmark and Share
 
ಅಮನ್ ಅವರು ನಿರ್ಮಿಸುತ್ತಿರುವ ಚಿತ್ರದ ಹೆಸರೇ ದಿಲ್ದಾರ. ಅವರೇ ಈ ಚಿತ್ರದ ನಾಯಕರೂ ಕೂಡಾ ಎಂಬುದು ಮತ್ತೊಂದು ವಿಶೇಷ. ದಿಲ್ದಾರನನ್ನು ಅಮರ್ ಎಂಬುವವರು ನಿರ್ದೇಶಿಸಿದ್ದು ಕಥೆಯೂ ಆವರದೇ ಅಂತೆ. ಇನ್ನೊಂದು ವಿಶೇಷವೇನೆಂದರೆ, ಈ ಚಿತ್ರದ ತಂಡವೆಲ್ಲಾ ಸಂಪೂರ್ಣ ಹೊಸಬರಿಂದಲೇ ತುಂಬಿದೆ. ನಿರ್ಮಾಪಕ- ನಿರ್ದೇಶಕ- ನಾಯಕ- ಸಂಗೀತ ನಿರ್ದೇಶಕ ಎಲ್ಲರೂ ಹೊಸಬರೇ.

ನಿರ್ದೇಶಕ ಅಮರ್ ಅವರದು ಬಂಗಾರಪೇಟೆ. ನಾಲ್ಕೈದು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರಿಗೆ ಮನದಾಳದಲ್ಲಿದ್ದುದು ಸಿನಿಮಾರಂಗವನ್ನು ಪ್ರವೇಶಿಸಬೇಕೆಂಬ ಮಹದಾಸೆಯಂತೆ. ಎರಡು ಚಿತ್ರಗಳಿಗೆ ಅದು ಹೇಗೋ ಚಿತ್ರಕಥೆ ಬರೆಯುವ ಅವಕಾಶವೂ ಸಿಕ್ಕಿತಂತೆ. ಆದರೆ ಆ ಸಿನಿಮಾಗಳು ಚಿತ್ರಮಂದಿರಕ್ಕೇ ಬರಲಿಲ್ಲ ಎಂಬುದು ವಿಪರ್ಯಾಸ!

ನಂತರ, ಕಥೆಯೊಂದನ್ನು ಬರೆದು ಗಾಂಧಿನಗರದ ಗಲ್ಲಿ ಗಲ್ಲಿಗಳನ್ನು ಸುತ್ತಿ ಅವರಿವರನ್ನು ಎಡತಾಕುತ್ತಿದ್ದಾಗ ಸಿಕ್ಕವರೇ ನಿರ್ಮಾಪಕ ಅಮನ್. ಅಂದು ಭೇಟಿಯ ರೂಪದಲ್ಲಿ ಶುರುವಾದ ಸ್ನೇಹ, ಇಂದು ದಿಲ್ದಾರ ಎಂಬ ಚಿತ್ರವನ್ನು ರೂಪಿಸುವವರೆಗೂ ಮುಂದುವರೆದಿದೆ ಎಂಬುದು ವಿಶೇಷ.

ಚಿತ್ರಕ್ಕೆ ಪ್ರವೀಣ್ ಡಿ. ರಾವ್ ಸಂಗೀತ ನೀಡಿದ್ದು, ನಾಗೇಂದ್ರ ಪ್ರಸಾದ್, ವಿ.ಮನೋಹರ್, ಪುನೀತ್ ಆರ್ಯ, ಸೂರ್ಯ ಇವರೇ ಮೊದಲಾದವರು ಹಾಡುಗಳನ್ನು ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಲ್ದಾರ, ಅಮನ್, ಅಮರ್