ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಿಯಾಂಕಾಗೆ ಉಪ್ಪಿ ಜತೆ ರಿಯಾಲಿಟಿ ಶೋನಲ್ಲಿ ಕುಣಿಯುವಾಸೆ! (Priyanka Upendra | Reality Show | Upendra)
ಸುದ್ದಿ/ಗಾಸಿಪ್
Feedback Print Bookmark and Share
 
Upendra, Priyanka
MOKSHA
ಬಂಗಾಳಿ ಚೆಲುವೆ ಪ್ರಿಯಾಂಕ ಅಂದು ಹೂವೇ ಹೂವೇ... ಎಂದು ಹುಚ್ಚೆಬ್ಬಿಸಿದ್ದು ಗೊತ್ತೇ ಇದೆ. ರಸಿಕನೆಂಬ ಹೆಗ್ಗಳಿಕೆಯ ನಿರ್ದೇಶಕ, ನಟ ರವಿಚಂದ್ರನ್‌ ಜತೆಗೆ ತೆರೆಯ ಮೇಲೆ ಹಾಟ್ ಆಗಿದ್ದಾಗಲಂತೂ ಇಡೀ ಗಾಂಧಿನಗರದಲ್ಲೇ ಬಿಸಿಯ ಅಲೆ ಕುದಿಯುತ್ತಿತ್ತು. ಆಮೇಲೆ, ಅದೇ ಪ್ರಿಯಾಂಕ ಕೊರಳಿಗೆ ಉಪೇಂದ್ರ ತಾಳಿ ಬಿಗಿದಾಗ ಎಲ್ಲರ ಬಿಸಿಯೂ ತಣ್ಣಗಾಗಿತ್ತು. ಇಬ್ಬರ ಮಕ್ಕಳ ತಾಯಿಯಾದರೂ ಪ್ರಿಯಾಂಕಾ ಉಪೇಂದ್ರ ಇನ್ನೂ ಗ್ಲ್ಯಾಮರಸ್ ಆಗಿಯೇ ಕಂಗೊಳಿಸುತ್ತಾರೆ ಅನ್ನೋದು ಪ್ರಿಯಾಂಕಾರ ಹೆಗ್ಗಳಿಕೆ.

ಅದೇನೇ ಇರಲಿ, ಕನ್ನಡದ ಟಿವಿ ಚಾನಲ್ ಪ್ರಿಯಾಂಕಾರನ್ನು ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಕರೆದಿದೆಯಂತೆ. ಆ ರಿಯಾಲಿಟಿ ಖ್ಯಾತ ಹಿಂದಿ ಶೋ 'ಎಂಟರ್‌ಟೈನ್‌ಮೆಂಟ್ ಕೇ ಲಿಯೇ ಕುಚ್ ಬೀ ಕರೇಗಾ' ರೀತಿಯಲ್ಲಿರುತ್ತದೆ. ಪ್ರಿಯಾಂಕಾ ಜತೆಗೆ ಇನ್ನಿಬ್ಬರು ಸಿನಿಮಾ ರಂಗದ ದಿಗ್ಗಜರೂ ಆ ರಿಯಾಲಿಟಿ ಶೋನಲ್ಲಿ ಇರಲಿದ್ದಾರಂತೆ.

ಪ್ರಿಯಾಂಕಾರಲ್ಲಿ ಈ ಬಗ್ಗೆ ಕೇಳಿದರೆ, ಹೌದು, ನನಗೆ ಆಹ್ವಾನ ಬಂದಿದ್ದು ನಿಜ. ಟಿವಿಗೆ ಎಂಟ್ರಿ ಕೊಡೋದಕ್ಕೆ ನನಗೆ ನಿಜಕ್ಕೂ ಸಂತೋಷವಿದೆ. ನವೆಂಬರ್ ಮೊದಲ ವಾರದಿಂದ ಆ ಕಾರ್ಯಕ್ರಮ ಆರಂಭವಾಗಲಿದೆ ಎನ್ನುತ್ತಾರೆ.

ಬಹಳಷ್ಟು ಸ್ಟಾರ್ ನಟ, ನಟಿಯರು ಟಿವಿಯಲ್ಲಿ ನೇರವಾಗಿ ಜನತೆಗೆ ಮುಖಾಮುಖಿಯಾಗಲು ಹೆದರುತ್ತಾರೆ ಹಾಗೂ ಇಷ್ಟಪಡೋದಿಲ್ಲ. ಆದರೆ, ನನಗೆ ಹಾಗಿಲ್ಲ. ಜನರೊಂದಿಗೆ ನೇರವಾಗಿ ಬೆರೆಯೋ ಮೂಲಕ ನಮ್ಮ ವ್ಯಕ್ತಿತ್ವ ಬೆಳೆಯಲು ಅನುಕೂಲವಾಗುತ್ತದೆ. ಕಲಿಯುವ ಅವಕಾಶ ಸಿಗುತ್ತದೆ. ನಮ್ಮನ್ನು ನಾವು ತೆರೆದುಕೊಳ್ಳಲು ಕೂಡಾ ಎನ್ನುತ್ತಾರೆ.

ಹಿಂದಿಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದ, ಸ್ವಯಂವರ, ಬಿಗ್ ಬಾಸ್, ಪತಿ ಪತ್ನಿ ಔರ್ ವೋನಂತಹ ಕಾರ್ಯಕ್ರಮಗಳು ಪ್ರಿಯಾಂಕಾ ಉಪೇಂದ್ರಗೆ ಇಷ್ಟವಾಗಿದೆಯಂತೆ. ಅಂತಹ ಕಾರ್ಯಕ್ರಮಗಳು ಕನ್ನಡದಲ್ಲಿ ನಡೆಸಲು ನನಗೆ ಅವಕಾಶ ಸಿಕ್ಕರೆ ನನ್ನ ಗ್ಯಾಂಗ್ ಆದ ಗುರುಕಿರಣ್- ಪಲ್ಲವಿ, ಪುನೀತ್- ಅಶ್ವಿನಿ ದಂಪತಿಗಳನ್ನೆಲ್ಲ ನಾನು ಕರೆಯುತ್ತೇನೆ ಎಂದು ನಗುತ್ತಾರೆ.

ಹಾಗಾದರೆ, ಅಂತಹ ಷೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತೀರಾ ಎಂದರೆ, ಅಯ್ಯಾ, ಸಾಧ್ಯವಿಲ್ಲ. ಎಲ್ಲ ಕ್ಯಾಮರಾ ಕಣ್ಣುಗಳಲ್ಲಿಯೂ ನಾವು ದಿನವಿಡೀ ಮನೆಯೊಳಗೆ ಇರೋದ್ನು, ನಮ್ಮ ನಡವಳಿಕೆ ಅಭ್ಯಾಸ ಮಾಡೋದನ್ನೆಲ್ಲ ನನ್ನ ಕೈಯಲ್ಲಿ ಊಹಿಸಲು ಸಾಧ್ಯವಿಲ್ಲ. ಬೇಕಾದರೆ, ಜಲಕ್ ದಿಖ್ ಲಾಜಾ ಕಾರ್ಯಕ್ರಮದಲ್ಲಿ ಕುಣಿದರೆ ಉಪೇಂದ್ರ ಜತೆ ಕುಣಿಯಲು ನಾನು ರೆಡಿ ಎಂದು ಪ್ರಿಯಾಂಕಾ ಕಣ್ಣು ಮಿಟುಕಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಯಾಂಕಾ, ಉಪೇಂದ್ರ, ಉಪ್ಪಿ, ರಿಯಲ್ ಸ್ಟಾರ್, ರಿಯಾಲಿಟಿ ಶೋ