ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿಹಿ ಸಿಹಿಯಾದ ಶಿರಿನ್ ಎಂಬ ಬಾಲೆ (Shirin | Yogi | Dhruva | Darshan)
ಸುದ್ದಿ/ಗಾಸಿಪ್
Feedback Print Bookmark and Share
 
Shirin
MOKSHA
ಮೋಹಕ ಕಂಗಳ ನಟಿ ಶಿರಿನ್ ಬೆಂಗಳೂರಿನ ಬಾಲೆ. ಡಾಕ್ಟರ್ ಅಥವಾ ಲಾಯರ್ ಆಗುವ ಕನಸು ಕಂಡಿದ್ದ ಶಿರಿನ್ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟು, ನಟಿಯಾಗಿದ್ದು ತೀರಾ ಅಚಾನಕ್ಕಾಗಿ. ಅವರು ನಟಿಸಿದ ಮೊದಲ ಚಿತ್ರ ಧನುಷ್ ನಾಯಕನಾಗಿದ್ದ ತಮಿಳು ಚಿತ್ರ ತುಳ್ಳುವಧು ಉಳ್ಳಮೈ. ಅಲ್ಲಿಂದ ಸಾಕಷ್ಟು ಹೆಸರು ಗಳಿಸಿದ ಶಿರಿನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಕನ್ನಡದಲ್ಲಿ ಅವರು ನಟಿಸಿದ ಪ್ರಥಮ ಚಿತ್ರ ದರ್ಶನ್ ನಾಯಕ ನಟನಾದ ಧ್ರುವ. ಈ ಚಿತ್ರದಲ್ಲಿ ಬಿಸಿ ಬಿಸಿಯಾಗಿ ಕಾಣಿಸಿಕೊಂಡು ಶಿರಿನ್ ಕನ್ನಡ ಚಿತ್ರರಸಿಕರಿಗೆ ಪರಿಚಯವಾದರು. ಮತ್ತೊಮ್ಮೆ ಅವರು ದರ್ಶನ್ ನಾಯಕತ್ವದ ಭೂಪತಿ ಚಿತ್ರದಲ್ಲಿ ನಟಿಸಿದರು.

ಇದೇನಪ್ಪಾ ಈ ಹುಡುಗಿ ದರ್ಶನ್ ಅವರ ಜೊತೆಗೆ ಹೆಚ್ಚು ಸಿನಿಮಾ ಮಾಡಿದಾಳಾ ಎಂದು ಅನಿಸಬಹುದು. ಇದಕ್ಕೂ ಕಾರಣ ಇದೆ, ಅದೇನಪ್ಪಾ ಅಂದ್ರೆ ಶಿರಿನ್ ಹೆಚ್ಚು ಕಮ್ಮಿ ದರ್ಶನ್ ಎತ್ತರಕ್ಕೆ ಇದ್ದಾರೆ ಅನ್ನೋದು. ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿರುವ ಶಿರಿನ್ ನಟಿಸಿರುವ 'ಯೋಗಿ' ಬಿಡುಗಡೆಯಾಗಿದೆ 'ಸಿಹಿ ಗಾಳಿ' ತಯಾರಿ ಹಂತದಲ್ಲಿದೆ. ನಿಮ್ಮ ಹೆಸರಿನ ಅರ್ಥ ಎನು ಅಂತ ಕೇಳಿದರೆ, ಪರ್ಷಿಯನ್ ಭಾಷೆಯಲ್ಲಿ ಸಿಹಿ ಎಂದರ್ಥ ಎನ್ನುತ್ತಾ ಸ್ವೀಟಾಗಿ ನಗುತ್ತಾರೆ ಶಿರಿನ್ .
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿರಿನ್, ಯೋಗಿ, ಧ್ರುವ, ದರ್ಶನ್