ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹುಡುಗರು ಬಹುಬೇಗನೆ ನನ್ನೆಡೆ ಆಕರ್ಷಿತರಾಗುತ್ತಾರೆ: ಶರ್ಮಿಳಾ ಮಾಂಡ್ರೆ (Sharmila Mandre | Priyanka Chopra | Swayamwara)
ಸುದ್ದಿ/ಗಾಸಿಪ್
Feedback Print Bookmark and Share
 
Sharmila Mandre
MOKSHA
ಕನ್ನಡದ ಸ್ಟೈಲಿಶ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶರ್ಮಿಳಾ ಮಾಂಡ್ರೆ ತನ್ನ ಮುಂಬರುವ ಚಿತ್ರಗಳಲ್ಲಿ ಇನ್ನೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಸ್ವಯಂವರ ಚಿತ್ರದಲ್ಲಿ ಕಿಟ್ಟಿ ಹಾಗೂ ದಿಗಂತ್‌ಗೆ ನಾಯಕಿಯಾಗಿ ಅಭಿನಯಿಸುತ್ತಿರುವ ಶರ್ಮಿಳಾ ತನ್ನ ಡ್ರೆಸ್‌ಗಳನ್ನು ತಾನೇ ಡಿಸೈನ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಿಯಾಂಕಾ ಛೋಪ್ರಾ ಮುಜ್‌ಸೇ ಶಾದಿ ಕರೋಗೆ ಚಿತ್ರದಲ್ಲಿ ಧರಿಸಿದಂತಹ ಉಡುಗೆಗಳನ್ನು ಈ ಚಿತ್ರಕ್ಕೆ ಬಳಸುತ್ತಿದ್ದಾಳಂತೆ.

ಮುಜ್‌ಸೇ ಶಾದಿ ಕರೋಗೆ ಚಿತ್ರ ನೋಡಿದ ಮೇಲೆ ಯಾರಾದರೂ ನಿಮ್ಮ ಬಳಿ ಮುಜ್‌ಸೇ ಶಾದಿ ಕರೋಗೆ (ನನ್ನನ್ನು ಮದುವೆಯಾಗುತ್ತೀಯಾ?) ಅಂದಿದ್ದಾರಾ ಹೇಗೆ ಅಂತ ಶರ್ಮಿಳಾಳನ್ನು ಕಿಚಾಯಿಸಿದರೆ ಅಷ್ಟೇ ಗಂಭೀರವಾಗಿ, ಮದುವೆಯಾಗಲು ನನ್ನ ವಯಸ್ಸಿನ್ನೂ ತುಂಬ ಚಿಕ್ಕದು. ಆದರೆ, ಬಹುತೇಕ ಹುಡುಗರು ನನ್ನನ್ನು ನೋಡಿದಾಕ್ಷಣ ಆಕರ್ಷಿತರಾಗುತ್ತಾರೆ. ಅವರು ಆಕರ್ಷಿತರಾಗೋದನ್ನು ನೋಡೋದು ನನಗೆ ತುಂಬ ಇಷ್ಟ ಅಂತಾಳೆ ಶರ್ಮಿಳಾ.

ಸ್ವಯಂವರ ಚಿತ್ರದಲ್ಲಿ ನೀವು ಪ್ರಿಯಾಂಕಾ ಛೋಪ್ರಾಳ ಮುಜ್‌ಸೇ ಶಾದಿ ಕರೋಗೆ ಚಿತ್ರದ ಅಭಿನಯಕ್ಕೆ ಹೋಲಿಸುವಂಥ ಅಭಿನಯ ತೋರುತ್ತೀರಾ ಎಂದರೆ, ನಾನು ಆಕೆಯನ್ನು ಅನುಕರಿಸುತ್ತಿಲ್ಲ. ಸ್ವಯಂವರದಲ್ಲಿ ಅಭಿನಯಿಸುವಾಗ ನಾನು ಆ ಚಿತ್ರ ನೋಡಲಿಲ್ಲ. ತೀರಾ ಇತ್ತೀಚೆಗೆ ನೋಡಿದೆ. ಪ್ರಿಯಾಂಕಾ ಆ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾಳೆ. ನಾನು ಕೂಡಾ ಅಂತೆಯೇ ನಟಿಸಿದ್ದೇನೆ ಎಂಬ ವಿಶ್ವಾಸವಿದೆ ಎಂದರು ಶರ್ಮಿಳಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರ್ಮಿಳಾ ಮಾಂಡ್ರೆ, ಸ್ವಯಂವರ, ಪ್ರಿಯಾಂಕಾ ಛೋಪ್ರಾ