ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲಿವುಡ್ಡಿಗೆ ಕಾಲಿಟ್ಟ ಕನ್ನಡದ ರಿಕಿ ಕೇಜ್! (Rikky Kaze | Bollywood | Accident)
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ಬಾಲಿವುಡ್ಡಿನಲ್ಲಿ ಕನ್ನಡಿಗರ ದಂಡೇ ಇದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಸಂಗೀತ ನಿರ್ದೇಶಕರುಗಳು ಮುಂಬೈ ಕಡೆಯ ದಾರಿಯನ್ನು ಹಿಡಿದು ಬಿಟ್ಟಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸಂಗೀತ ನಿರ್ದೇಶಕ ಸಂದೀಪ್ ಚೌಟ. ಈ ಚೌಟ ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ವೀರ ಕನ್ನಡಿಗ. ಅದೇ ರೀತಿ ನಮ್ಮವನೇ ಅದ ಮತ್ತೊಬ್ಬ ಸಂಗೀತ ನಿರ್ದೇಶಕ ರಿಕಿ ಕೇಜ್ ಬಾಲಿವುಡ್ಡಿನಲ್ಲಿ ಬ್ಯಾಂಡ್ ಬಜಾಯಿಸಲು ಹೋಗಿದ್ದಾರೆ.

'ಓ ಪಾಂಚ್ ದಿನ್' ಎಂಬ ಹಿಂದಿ ಚಿತ್ರಕ್ಕೆ ರಿಕಿ ಸಂಗೀತ ನೀಡಿದ್ದಾರೆ. ಅಲ್ಲದೇ ಮತ್ತೊಂದು ಚಿತ್ರಕ್ಕೂ ಸಂಗೀತ ನೀಡುವುದಾಗಿ ಅವರು ಒಪ್ಪಿಕೊಂಡಿದ್ದಾರಂತೆ. ಕನ್ನಡದ 'ಆಕ್ಸಿಡೆಂಟ್' ಚಿತ್ರಕ್ಕೆ ಚೊಚ್ಚಲ ಸಂಗೀತ ನೀಡಿ ರಿಕಿ ಗೆದ್ದಿದ್ದರು. 'ವೆಂಕಟ ಇನ್ ಸಂಕಟ' ಚಿತ್ರಕ್ಕೂ ಅವರೇ ಸಂಗೀತ ನೀಡಿದ್ದಾರೆ . ಅದೇಕೊ ಅ ಚಿತ್ರದಲ್ಲಿ ಅವರ ಬೀಟ್ಸ್ ಸದ್ದೇ ಮಾಡಲಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ 'ಕ್ರೇಜಿ ಕುಟುಂಬ'ಕ್ಕೆ ರಿಕಿ ಸಂಗೀತ ನೀಡಿದ್ದಾರೆ. ಕ್ರೇಜಿ ಕುಟುಂಬದ ಕ್ರೇಜೇನಪ್ಪಾ ಅಂದರೆ, ಖ್ಯಾತನಾಮರಾದ ಕುವೆಂಪು, ಕೆ.ಎಸ್.ನರಸಿಂಹ ಸ್ವಾಮಿ ಹಾಗೂ ಜಯಂತ್ ಕಾಯ್ಕಿಣಿ ಅವರು ರಚಿಸಿದ ಗೀತೆಗಳಿಗೆ ರಿಕಿ ಮಾಧುರ್ಯಭರಿತ ಸಂಗೀತ ನೀಡಿದ್ದಾರಂತೆ. ಬಾಲಿವುಡ್ಡಿಗೆ ಹೋಗಿ ಈ ರಿಕಿ ಸುದ್ದಿ ಮಾಡಲಿ ಅಂತ ಹಾರೈಸೋಣವೇ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಿಕಿ ಕೇಜ್, ಸಂಗೀತ, ಆಕ್ಸಿಡೆಂಟ್, ಬಾಲಿವುಡ್