ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಷ್ಟ್ರಪ್ರಶಸ್ತಿ ವಿಜೇತ ನಟಿ ಉಮಾಶ್ರೀಗೆ ಗೋವಾ ಚಿತ್ರೋತ್ಸವದಲ್ಲಿ ಅವಮಾನ!? (40th International Film Festival | Umashri | Prakash Raj)
ಸುದ್ದಿ/ಗಾಸಿಪ್
Bookmark and Share Feedback Print
 
Umashri
MOKSHA
40ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದಲ್ಲಿ ಆರಂಭವಾಗಿದೆ. ಚಲನಚಿತ್ರೋತ್ಸವದಲ್ಲಿ ಆ ವರ್ಷದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನಟಿಯರಿಗೆ ಆಹ್ವಾನವಿರುವುದು ಸಂಪ್ರದಾಯ. ಅಂತೆಯೇ ಕನ್ನಡದ ಹೆಮ್ಮೆಯ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಉಮಾಶ್ರೀ ಅವರಿಗೂ ಆಹ್ವಾನ ಹೋಗಿತ್ತು. ಕೇವಲ ಭಾಗವಹಿಸಲಿಕ್ಕಲ್ಲ. ಸಮಾರಂಭದಲ್ಲಿ ವೇದಿಕೆಯಲ್ಲಿದ್ದು, ದೀಪ ಬೆಳಗಲು ಜೊತೆಗೂಡುವುದಕ್ಕೆ ಬರಬೇಕೆಂದು ಉಮಾಶ್ರೀ ಅವರಿಗೆ ಆಹ್ವಾನ ಬಂದಿತ್ತು. ಅಂತೆಯೇ ಉಮಾಶ್ರೀ ಗೋವಾಕ್ಕೆ ತೆರಳಿದ್ದರು ಕೂಡಾ.

ಆದರೆ, ಸಮಾರಂಭದ ಫೋಟೋಗಳಲ್ಲಿ ಎಲ್ಲೂ ಉಮಾಶ್ರೀ ಅವರ ಫೋಟೋಗಳಿಲ್ಲ. ಹಾಗಾದರೆ ಉಮಾಶ್ರೀ ಎಲ್ಲಿ ಹೋದರು ಎಂಬ ಕುತೂಹಲ ಬರೋದು ಸಹಜವೇ. ನಿಜ. ಮೂಲಗಳ ಪ್ರಕಾರ ಉಮಾಶ್ರೀ ಅವರನ್ನು ಯಾರೂ ವೇದಿಕೆಗೆ ಆಹ್ವಾನಿಸಲೇ ಇಲ್ಲವಂತೆ. ಆಹ್ವಾನಿಸದಿದ್ದುದರಿಂದ ಉಮಾಶ್ರೀ ವೇದಿಕೆ ಹತ್ತುವ ಗೋಜಿಗೆ ಹೋಗಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಬೆಂಗಳೂರಿಗೆ ಬಂದಿದ್ದಾರೆ.

ಅಂದಹಾಗೆ, ಇದೇ ಸಮಾರಂಭಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಇನ್ನೊಬ್ಬ ಕನ್ನಡದ ನಟ ಪ್ರಕಾಶ್ ರೈ ಅವರಿಗೂ ಆಹ್ವಾನ ಹೋಗಿತ್ತು. ಆದರೆ ಅವರು ತಮ್ಮ ಮೊದಲ ನಿರ್ದೇಶನವಾದ ಕನ್ನಡದ ನಾನು ನನ್ನ ಕನಸು ಚಿತ್ರದಲ್ಲಿ ಮಗ್ನವಾಗಿದ್ದರಿಂದ ಗೋವಾಕ್ಕೆ ಹೋಗಿರಲಿಲ್ಲ.

ಉಮಾಶ್ರೀ ಅವರಿಗೆ ಅಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವಮಾನವಾಗಿದ್ದು ನಿಜವೇ ಅಂತ ನೇರವಾಗಿ ಉಮಾಶ್ರೀ ಅವರನ್ನೇ ಕೇಳಿದರೆ ಅವರು, ಇದನ್ನೆಲ್ಲ ದೊಡ್ಡ ಸಂಗತಿ ಮಾಡಬೇಡಿ. ನನಗೆ ತುಂಬ ಮುಜುಗರವಾಗಿದೆ ಎಂದಷ್ಟೆ ಹೇಳಿ ಮಾತು ಮುಗಿಸಿದರು.

ಮೂಲಗಳ ಪ್ರಕಾರ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಅವರಿಗೂ ಈ ಪ್ರಕರಣ ಅತೀವ ಬೇಸರ ಮೂಡಿಸಿದ್ದು, ಅವರು ಸಂಘಟಕರ ಮೇಲೆ ಸಮಾರಂಭ ಮುಗಿದ ಮೇಲೆ ಸಿಟ್ಟು ತೋರಿಸಿದ್ದಾರೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಮಾಶ್ರೀ, ಪ್ರಕಾಶ್ ರೈ, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ