ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಟಿವಿಯಲ್ಲಿ 'ಕಾಮಿಡಿ ಟೈಮ್' ಮಾಡಲಿರುವ ಗಣೇಶ್! (Ganesh | Comedy Time | Udaya TV | Golden Star | Mungaru Male)
ಸುದ್ದಿ/ಗಾಸಿಪ್
Bookmark and Share Feedback Print
 
Ganesh
MOKSHA
'ನಮಸ್ಕಾರ, ನಮಸ್ಕಾರ, ನಮಸ್ಕಾರ...' ಎನ್ನುತ್ತಾ 'ಕಾಮಿಡಿ ಟೈಂ' ನಿರ್ವಹಿಸಿ ಎಲ್ಲರ ಮನೆಹುಡುಗನಾಗಿದ್ದ ಗಣೇಶ್ ರಾತ್ರೋರಾತ್ರಿ ಸುರಿದ ಮುಂಗಾರು ಮಳೆಯ ಪ್ರಸಿದ್ಧಿಯಲ್ಲಿ ಕೊಚ್ಚಿಹೋಗಿ ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಿದ್ದು ಹಳೇ ಕಥೆ. ಯಾವಾಗ ಗಣೇಶ್ ಸ್ಟಾರ್ ಆದರೋ, ಅಲ್ಲಿಗೆ ಕಾಮಿಡಿ ಟೈಂ ಕಥೆ ಮುಗಿದಿತ್ತು. ಆದರೀಗ ಮತ್ತೆ ಕಾಮಿಡಿ ಟೈಂ ಬರುತ್ತಿದೆ. ಅದೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಾಮಿಡಿ ಟೈಂ ನಿರ್ವಹಣೆ ಮಾಡುವ ಮೂಲಕ ಮತ್ತೆ ನಿಮಗೆ ನಮಸ್ಕಾರ, ನಮಸ್ಕಾರ, ನಮಸ್ಕಾರ... ಎನ್ನಲಿದ್ದಾರೆ.

ಹೌದು. ಕಾಮಿಡಿ ಟೈಂನ ಎರಡನೇ ಇನ್ನಿಂಗ್ಸ್ ಆರಂಭಿಸಲು ಗಣೇಶ್ ಸಿದ್ಧರಾಗಿದ್ದಾರೆ. ಆದರೆ ಈ ಕಾಮಿಡಿ ಟೈಂ ನೂರಾರು ಕಂತುಗಳಲ್ಲಿ ಮುಗಿಯದ ಸರಣಿಯಾಗಿ ಬರೋದಿಲ್ಲ. ಕೇವಲ ಐದು ಕಂತುಗಳಲ್ಲಿ ಪ್ರಸಾರವಾಗಲಿರುವ ಈ ವಿಶೇಷ ಕಾರ್ಯಕ್ರಮ ಡಿಸೆಂಬರ್ ಮೊದಲ ವಾರದಿಂದ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮತ್ತೆ ಅಭಿಮಾನಿಗಳ ಜತೆ ಮಾತನಾಡುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಈಗಾಗಲೇ ಈ ಕುರಿತು ಅಭಿಮಾನಿ ನೋಡುಗರಿಂದ ಪತ್ರಗಳ ಸುರಿಮಳೆಯೇ ಬಂದಿದೆ ಎನ್ನುತ್ತಾರೆ ಗಣೇಶ್.

ಗಣೇಶ್ ಖ್ಯಾತಿಯ ಉತ್ತುಂಗಕ್ಕೇರಿದರೂ, ಪ್ರತಿ ಬಾರಿಯೂ ಅಭಿಮಾನಿಗಳು ಅವರ್ನನು ಕೇಳುತ್ತಿದ್ದುದು ಒಂದೇ ಪ್ರಶ್ನೆ. ಮತ್ತೆ ಕಾಮಿಡಿ ಟೈಂ ಮತ್ತೆ ಯಾಕೆ ಮಾಡಬಾರದು? ಎಂಬುದು ಗಣೇಶ್ ಅಭಿಮಾನಿಗಳ ಆತ್ಮೀಯ ಕೋರಿಕೆಯ ಪ್ರಶ್ನೆಯಾಗಿತ್ತು. ಅದಕ್ಕಾಗಿ ಗಣೇಶ್ ಮತ್ತೆ ಕಾಮಿಡಿ ಟೈಂ ಕಿರೀಟ ತೊಟ್ಟಿದ್ದಾರೆ. ಆದರೆ ಈ ಬಾರಿ ಮಾತ್ರ ಕಾಮಿಡಿ ಟೈಂ ಕಾರ್ಯಕ್ರಮವನ್ನು ಅವರು ಸ್ವಲ್ಪ ವಿಭಿನ್ನವಾಗಿ ಮಾಡಲಿದ್ದಾರಂತೆ. ಹಾಗೆನ್ನುವ ಮೂಲಕ ಅಭಿಮಾನಿಗಳ ಕುತೂಹಲದ ಟೆಂಪರೇಚರ್ರನ್ನೂ ಏರಿಸಿದ್ದಾರೆ.

ಒಟ್ಟಾರೆ ಕೆಲವು ವರ್ಷಗಳಿಂದ ಕಿರುತೆರೆಯಿಂದ ಮಾಯವೇ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶನ ಕಾಮಿಡಿಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉದಯ ಟಿವಿ, ಕಾಮಿಡಿ ಟೈಂ, ಗಣೇಶ್, ಗೋಲ್ಡನ್ ಸ್ಟಾರ್, ಮುಂಗಾರು ಮಳೆ