ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶುಕ್ರವಾರ ಸೆಟ್ಟೇರುತ್ತಿವೆ ಸಾಲು ಸಾಲು ಚಿತ್ರಗಳು (Deadly Soma | Amantrana | Salaga | Idu Katheyalla Jeevana)
ಸುದ್ದಿ/ಗಾಸಿಪ್
Bookmark and Share Feedback Print
 
ಇದೇ ಡಿಸೆಂಬರ್ 11 (ಶುಕ್ರವಾರ) ಸಾಲು ಸಾಲಾಗಿ 5 ಕನ್ನಡ ಚಿತ್ರಗಳು ಸೆಟ್ಟೇರುತ್ತಿವೆ. ಸೋಲಲಿ ಬಿಡಲಿ, ನಮ್ಮ ಕನ್ನಡ ಚಿತ್ರರಂಗ ಪಟ್ಟು ಬಡುವುದಿಲ್ಲ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ.

ರವಿ ಶ್ರೀವತ್ಸ ನಿರ್ದೇಶನದ 'ಡೆಡ್ಲಿ ಸೋಮ-2', ಮಹೇಶ್ ಚಿನ್ಮಯಿ ನಿರ್ದೇಶನದ 'ಪ್ರೊಡಕ್ಷನ್-1', ರಘುವರ್ಧನ್ ನಿರ್ದೇಶನದ 'ಆಮಂತ್ರಣ', ಪ್ರಾಣ್ ನಿರ್ದೇಶನದ 'ಸಲಗ' ಮತ್ತು ರವೀಂದ್ರ ನಿರ್ದೇಶನದ 'ಇದು ಕತೆ ಅಲ್ಲ ಜೀವನ' ಇದೇ ವಾರ ಸೆಟ್ಟೇರುತ್ತಿರುವ ಹೊಸ ಚಿತ್ರಗಳ ಪಟ್ಟಿ.

ಹೆಚ್ಚು ಕಮ್ಮಿ ಇದರಲ್ಲಿ ನಾಲ್ಕು ಚಿತ್ರಗಳು ಹೊಸಬರವು. ಮಹೇಶ್ ಚಿನ್ಮಯಿ ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 1994ರಲ್ಲಿ ದಾವಣಗೆರೆಯಲ್ಲಿ ನಡೆದ ನೈಜ ಘಟನೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಅಭಯ್ ಮತ್ತು ನವ್ಯ ಈ ಚಿತ್ರದ ಜೋಡಿ.

'ಆಮಂತ್ರಣ'ದಲ್ಲಿ ಬಿಯಾಂಕ ದೇಸಾಯಿ ನಟಿಸುತ್ತಿದ್ದಾರೆ. 'ಸಲಗ' ಚಿತ್ರದಲ್ಲಿ ಕಿರಣ್ ಮತ್ತು ಆಶಾ ತ್ರಿಪಾಟಿ ಜೋಡಿಯಾಗಿ ನಟಿಸುತ್ತಿದ್ದಾರೆ. ಉಳಿದ ಚಿತ್ರಗಳ ಮಾಹಿತಿ ಕೇಳಬೇಡಿ ಅದೆಲ್ಲವೂ ನಿಗೂಢ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೆಡ್ಲಿ ಸೋಮ, ಆಮಂತ್ರಣ, ಸಲಗ, ಇದು ಕತೆ ಅಲ್ಲ ಜೀವನ, ಕನ್ನಡ ಸಿನಿಮಾ