ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಲಾರಿ ಕ್ಲೀನರ್' ಪವನ್ ಚಿತ್ರ ನಿರ್ಮಾಪಕನಾದದ್ದು! (Hero Nanalla | Pavan | Kannada Cinema | Bangalore)
ಸುದ್ದಿ/ಗಾಸಿಪ್
Bookmark and Share Feedback Print
 
'ಹೀರೋ ನಾನಲ್ಲ' ಚಿತ್ರದ ನಿರ್ಮಾಪಕ ಕಂ ನಾಯಕ ನಟ ಪವನ್ ತಮ್ಮ ಜೀವನದ ಗಾಥೆಯ ವಿವರಣೆ ನೀಡಿದ್ದಾರೆ. ಮೂರನೇ ಕ್ಲಾಸ್ ಓದಿ, ಲಾರಿ ಕ್ಲೀನರ್ ಆಗಿ ಹೀರೋ ಆದ ಹಳೆಯ ನೆನಪುಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಜನಿಸಿದ ಪವನ್ ಅವರ ಮೂಲ ಹೆಸರು ಸಲೀಂ ಅಂತೆ. ಮೂರನೇ ಕ್ಲಾಸ್ ಓದಿದರೂ ಪವನ್, ಆರು ಭಾಷೆಗಳನ್ನು ಓದಿ ಬರೆಯುತ್ತಾರಂತೆ!

ನೆಲಮಂಗಲದಲ್ಲಿದ್ದಾಗ ಸ್ಟಾರ್ ಗಣೇಶ್ ಅವರಿಗೆ ಸ್ನೇಹಿತರಾಗಿದ್ದರಂತೆ. ಲಾರಿ ಕ್ಲೀನರ್ ಕೆಲಸ ಮಾಡಿಕೊಂಡು ಹಂತಹಂತವಾಗಿ ಬೆಳೆದು ಇದೀಗ ಚಿತ್ರಕ್ಕೆ ನಿರ್ಮಾಪಕನಾಗುವ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪವನ್. 'ಹೀರೋ ನಾನಲ್ಲ' ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆಯಂತೆ. ಇವಕ್ಕೆ ರಾಜು ಉಪೇಂದ್ರ ಕುಮಾರ್ ಸಂಗೀತ ನೀಡಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೀರೋ ನಾನಲ್ಲ, ಪವನ್, ಕನ್ನಡ ಸಿನಿಮಾ, ಬೆಂಗಳೂರು