ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್‌ಗೆ ಲೇಡಿ 'ಸಾರಥಿ'ಯಾದ ಚಿಕ್ಕಮಗಳೂರು ದೀಪಾ (Deepa | Darshan | Dinakar | Sarathi)
ಸುದ್ದಿ/ಗಾಸಿಪ್
Bookmark and Share Feedback Print
 
ದರ್ಶನ್ ನಾಯಕನಾಗಿ ನಟಿಸುತ್ತಿರುವ 'ಸಾರಥಿ' ಚಿತ್ರಕ್ಕೆ ದೀಪಾ ಎಂಬ ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ದರ್ಶನ್ ಚಿತ್ರಗಳಲ್ಲಿ ಮುಕ್ಕಾಲು ಭಾಗ ಪರಭಾಷಾ ನಾಯಕಿಯರೇ ನಟಿಸಿದ್ದಾರೆ. ಆದರೆ ಈ ಬಾರಿ ಮಾತ್ರ ನಿರ್ದೇಶಕ ದಿನಕರ್ ಹಟವೆಂಬಂತೆ ಕನ್ನಡದ ಹುಡುಗಿಯನ್ನೇ ಆರಿಸಿ ಕರೆತಂದಿದ್ದಾರೆ.

ದೀಪಾ, ನಿಜವಾಗಿಯೂ ನಟಿಯಾಗಬೇಕೆಂಬ ಕನಸು ಕಂಡಿದ್ದರಂತೆ. ಈ ಚಿತ್ರದಲ್ಲಿ ದೀಪಾಳಿಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲವಂತೆ. ಕಾರಣ ದರ್ಶನ್ ಮತ್ತು ದಿನಕರ್ ಅವರ ಸಹಕಾರ.

ನಟಿಸುವ ಮುನ್ನ ದೀಪಾ, ಅಭಿನಯ ತರಬೇತಿ ಶಾಲೆಯಲ್ಲಿ ಎರಡು ತಿಂಗಳುಗಳ ಕಾಲ ಅಭಿನಯ ತರಬೇತಿ ಪಡೆದುಕೊಂಡು ಆನಂತರ ಕ್ಯಾಮರಾ ಮುಂದೆ ನಿಂತವರು.

ದೀಪಾ ಆರ್ಕಿಟೆಕ್ಟ್ ವಿದ್ಯಾರ್ಥಿ. ಓದಿನ ಜೊತೆಗೆ ನಟನೆ ಮಾಡಬೇಕೆಂಬುದು ಅವರ ಸದ್ಯದ ಗುರಿಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಾ, ದರ್ಶನ್, ದಿನಕರ್, ಸಾರಥಿ, ಕನ್ನಡ ಸಿನಿಮಾ, ಚಿಕ್ಕಮಗಳೂರು, ಕರ್ನಾಟಕ