ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬುಲೆಟ್ ಪವಾಡ: ಒಂದು ಹಾಡಿಗೆ 20 ನಟರು! (Aithalakkadi | Kannada Film | Kannada Cinema | Bullet Prakash)
ಸುದ್ದಿ/ಗಾಸಿಪ್
Bookmark and Share Feedback Print
 
Bullet Prakash
MOKSHA
ಕನ್ನಡದ ಹಲವು ಚಿತ್ರಗಳಲ್ಲಿ ಹಾಸ್ಯಕಲಾವಿದನಾಗಿ ನಟಿಸಿದ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ? ಅಜಾನುಬಾಹು, ಕಡುಕಪ್ಪು ಮೈ ಬಣ್ಣ, ಗುಂಡುಮುಖ, ನಗು, ಕೋಪ, ಮಾತು ಎಲ್ಲದರಲ್ಲೂ ಪ್ರೇಕ್ಷಕರ ಮನಗೆಲ್ಲುತ್ತಾರೆ ಪ್ರಕಾಶ್. ಸಾಧು, ದೊಡ್ಡಣ್ಣ, ಕೋಮಲ್ ಅವರೊಂದಿಗೆ ಪ್ರಕಾಶ್ ನಟಿಸಿದರೆ ಅದಕ್ಕೆಂದೇ ಚಿತ್ರರಸಿಕರು ಥಿಯೇಟರ್ ಕಡೆಗೆ ಹೋಗುವುದುಂಟು.

ಸ್ವತಃ ಪ್ರಕಾಶ್ ನಿರ್ಮಿಸುತ್ತಿರುವ 'ಐತಲಕ್ಕಡಿ' ಚಿತ್ರದ ಹಾಡೊಂದರಲ್ಲಿ ಕನ್ನಡದ 20 ನಟರು ನಟಿಸಿದ್ದಾರಂತೆ. ಅದಕ್ಕೆ ಬುಲೆಟ್ ಪ್ರಕಾಶ್ ಹಾಗೂ ಆ ನಟರೆಲ್ಲರ ನಡುವೆ ಇರುವ ಉತ್ತಮ ಬಾಂಧವ್ಯ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ರವಿಚಂದ್ರನ್, ಸುದೀಪ್, ಜಗ್ಗೇಶ್, ದುನಿಯಾ ವಿಜಯ್, ವಿಜಯ ರಾಘವೇಂದ್ರ ಸೇರಿದಂತೆ 20ಕ್ಕೂ ಹೆಚ್ಚು ನಟರು 'ಐತಲಕ್ಕಡಿ'ಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದರಿಂದ ಖುಷಿಗೊಂಡ ಪ್ರಕಾಶ್ ತಮ್ಮ ಸ್ನೇಹಿತರೆಲ್ಲರಿಗೂ ಚಿರಋಣಿಯಾಗಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬುಲೆಟ್ ಪ್ರಕಾಶ್, ಕನ್ನಡ ಚಿತ್ರ, ಕನ್ನಡ ಸಿನಿಮಾ, ಕಲಾವಿದ, ಐತಲಕ್ಕಡಿ