ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡವ್ ಹೊಡೆಯುತ್ತಿರುವ ನಿರ್ದೇಶಕ ಪ್ರೇಮ್ (Prem | Dov | Jogayya)
ಸುದ್ದಿ/ಗಾಸಿಪ್
Bookmark and Share Feedback Print
 
Prem
MOKSHA
ನಟ ಕಂ ನಿರ್ದೇಶಕ ಪ್ರೇಮ್ ಸದ್ಯ ಜೋಗಯ್ಯ ಚಿತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಎಂದುಕೊಂಡರೆ ಅದು ಸರಿ. ಹಾಗೆಯೇ ಪ್ರೇಮ್, ಡವ್ ಶೀರ್ಷಿಕೆಯ ಚಿತ್ರವೊಂದರಲ್ಲಿ ನಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿನ ಗಾಂಧಿನಗರದ ಹಾಟ್ ಸುದ್ದಿ. ಯಶವಂತ್ ನಿರ್ದೇಶನ ಮಾಡಲಿರುವ ಡವ್ ಚಿತ್ರದಲ್ಲಿ ಪ್ರೇಮ್ ನಾಯಕನಟರಾಗಿ ಅಭಿನಯಿಸಲು ಒಪ್ಪಿದ್ದಾರೆಂಬುದು ಸದ್ಯದ ವರ್ತಮಾನ.

ಡವ್ ಎಂಬ ಹೆಸರು ಪ್ರೇಮ್ ಅವರಿಗೆ ಹೇಳಿ ಮಾಡಿಸಿದಂತಿದೆ ಎಂಬುದು ಗಾಂಧಿನಗರದ ಹೀರೀಕರ ತಮಾಷೆ. ಪರಭಾಷಾ ನಟಿ ತಮನ್ನಾ ಈ ಚಿತ್ರಕ್ಕೆ ನಾಯಕಿಯಂತೆ. ತಮನ್ನಾಳನ್ನು ಇಲ್ಲಿಗೆ ಕರೆತರುವಲ್ಲಿ ಯಶವಂತ್ ಸದ್ಯಕ್ಕೆ ನಿರತರಾಗಿದ್ದರಂತೆ.

ಮೂಲಗಳ ಪ್ರಕಾರ ಜೋಗಯ್ಯ ಚಿತ್ರಕ್ಕಿಂತ ಮುಂಚೆಯೇ ಡವ್ ಚಿತ್ರ ಬಿಡುಗಡೆಯಾಗುತ್ತದೆಯಂತೆ. ಒಂದು ಕಡೆ ಶಿವಣ್ಣನ ಜೋಗಯ್ಯ ನಿರ್ದೇಶನ ಮಾಡಬೇಕು ಮತ್ತೊಂದೆಡೆ ಡವ್ ಚಿತ್ರದಲ್ಲಿ ನಟಿಸಬೇಕು. ಒಟ್ಟಾರೆ ಪ್ರೇಮ್ ಡವ್ ಮಾಡಹೊರಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್, ಡವ್, ಜೋಗಯ್ಯ