ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೊಂದು ನಾರದ ವಿಜಯದಲ್ಲಿ ಶಶಿಕುಮಾರ್! (Narada Vijaya | Shashikumar | Surya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟರಾಗಿ ರಾಜಕಾರಣಿಯಾದ ಶಶಿಕುಮಾರ್ ಹಲವು ದಿನಗಳ ಕಾಲ ನಮ್ಮ ಚಿತ್ರರಂಗವನ್ನೇ ಮರೆತುಬಿಟ್ಟಿದ್ದರು. ಇದೀಗ ಶಶಿ ಮತ್ತೊಮ್ಮೆ ಬಣ್ಣಹಚ್ಚಲಿದ್ದಾರೆ. ಅದೂ ಪೂರ್ಣ ಪ್ರಮಾಣದ ನಾಯಕನಟನಾಗಿ.

ಅವರು ನಟಿಸುತ್ತಿರುವ ಚಿತ್ರದ ಹೆಸರು ನಾರದ ವಿಜಯ! ಅಯ್ಯೋ, ಇದು ಹಿಂದೆ ಬಂದಿತ್ತಲ್ಲ ಎಂದುಕೊಂಡಿರಾ? ಹೌದು. ಹಿಂದೆ ಅನಂತ್‌ನಾಗ್ ನಟನೆಯಲ್ಲಿ ನಾರದ ವಿಜಯ ಹೆಸರಿನ ಚಿತ್ರ ಬಂದಿತ್ತು. ಆದರೆ ಇದು ಹೊಸ ನಾರದ ವಿಜಯ. ಈ ಚಿತ್ರದಲ್ಲಿ ಶಶಿಯೊಂದಿಗೆ ಯುವ ನಟ ಸೂರ್ಯ ಎಂಬಾತ ನಟಿಸುತ್ತಿದ್ದಾನೆ. ಮುಂಬೈ ಬೆಡಗಿ ಮೋಹಿನಿ ವಿಶ್ವಾಸ್ ಈ ಚಿತ್ರದ ನಾಯಕಿ.

ಸಿಮ್ರಾನ್ ಮೂವೀ ಮೇಕರ್ಸ್ ಲಾಂಛನದಡಿಯಲ್ಲಿ ಮೂಡಿಬರುತ್ತಿರುವ, ಮಂಜು ದೈವಜ್ಙ ನಿರ್ದೇಶನದ ನಾರದ ವಿಜಯ ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್, ಬಿರಾದಾರ್, ಸುನೀತಾ ಶೆಟ್ಟಿ, ಜ್ಯೋತಿ ಮುಂತಾದವರು ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾರದ ವಿಜಯ, ಶಶಿಕುಮಾರ್, ಸೂರ್ಯ