ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣನಿಗೆ ನಾಯಕಿಯಾಗಿ ಪದ್ಮಪ್ರಿಯಾ ಅಯ್ಯರ್ (Shivarajkumar | Padmapriya | Thamassu)
ಸುದ್ದಿ/ಗಾಸಿಪ್
Bookmark and Share Feedback Print
 
Padmapriya
MOKSHA
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಲು ಅದೃಷ್ಟ ಮಾಡಿರಬೇಕು. ಅಂತಹ ಅದೃಷ್ಟವನ್ನು ಪಡೆದುಕೊಂಡಿದ್ದಾರೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿ ಪದ್ಮಪ್ರಿಯ.

ಪದ್ಮ ಶಿವಣ್ಣನ ಜೊತೆಗೆ ನಟಿಸುತ್ತಿರುವ ಚಿತ್ರ ತಮಸ್ಸು. ತಮಿಳು ನಾಡಿನ ಅಯ್ಯರ್ ಕುಟುಂಬದ ಕುಡಿಯಾದ ಪದ್ಮ ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದು ಕೆಲಸವನ್ನೂ ಗಿಟ್ಟಿಸಿಕೊಂಡು ಬಿಡುವು ಸಿಕ್ಕಾಗಲೆಲ್ಲ ಮಾಡಲಿಂಗ್ ಮಾಡುತ್ತಿದ್ದರು. ನಂತರ ಸಿನಿಮಾ ರಂಗಕ್ಕೆ ಕಾಲಿರಿಸಿದ್ದು ಈಗ ಇತಿಹಾಸ.

ಅದೇನೇ ಇರಲಿ, ಮನರಂಜನಾ ಕ್ಷೇತ್ರವಾದ ಸಿನಿಮಾರಂಗಕ್ಕೆ ಭಾಷೆಗಳ ಗಡಿ ಇಲ್ಲ ಎನ್ನುವ ಪದ್ಮ ಕನ್ನಡದಲ್ಲಿ ಎಲ್ಲರೂ ಸಹಕರಿಸುತ್ತಾರೆ. ಇಲ್ಲಿ ಅಭಿನಯಿಸಿದ್ದಕ್ಕೆ ತಮಗೆ ಸಂತೋಷವಿದೆ ಎನ್ನುತ್ತಾರೆ ಈ ಪದ್ಮಪ್ರಿಯಾ. 4 ರಾಜ್ಯ ಪ್ರಶಸ್ತಿಗಳನ್ನು ಸ್ವೀಕರಿಸಿರುವ ಪದ್ಮ ಕನ್ನಡದಲ್ಲೂ ಯಶಸ್ವಿಯಾಗಲೆಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಪದ್ಮಪ್ರಿಯಾ, ತಮಸ್ಸು