ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಿಗಳ ದಿನದ ಗಿಫ್ಟ್: ಶ್ರೀನಗರ ಕಿಟ್ಟಿ ಅಪ್ಪ ಆದ್ರು! (Srinagar Kitty | Bhavana | Valentine Day)
ಸುದ್ದಿ/ಗಾಸಿಪ್
Bookmark and Share Feedback Print
 
Kitty with wife Bhavana
MOKSHA
ಪ್ರೇಮಿಗಳ ದಿನಕ್ಕೆ ನಿಜ್ಕಕೂ ಶ್ರೀನಗರ ಕಿಟ್ಟಿಯ ಅಮರ ಪ್ರೇಮಕ್ಕೆ ನಿಜಕ್ಕೂ ಭರ್ಜರಿ ಕಾಣಿಕೆಯೇ ಸಿಕ್ಕಿದೆ. ಪ್ರೇಮಿಗಳ ದಿನದಂದು, ಅಂದರೆ ಫೆ.14ರ ಭಾನುವಾರ ಕಿಟ್ಟಿ ಪತ್ನಿ ಭಾವನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಭಾವನಾ ಅವರು ಪತ್ರಕರ್ತ ರವಿ ಬೆಳೆಗೆರೆ ಅವರ ಎರಡನೇ ಮಗಳಾಗಿದ್ದಾರೆ. ಕಿಟ್ಟಿ ಹಾಗೂ ಭಾವನಾರ ಮದುವೆ 2008ರಲ್ಲಿ ನಡೆದಿತ್ತು. ಆದರೆ ಒಂಭತ್ತು ತಿಂಗಳು ತುಂಬುವ ಮೊದಲೇ ಹೆರಿಗೆಯಾಗಿದ್ದು, ಪ್ರಿಮೆಚ್ಯೂರ್ ಬೇಬಿಯಾಗಿದೆ. ಆದರೂ ಮಗು ಆರೋಗ್ಯವಾಗಿದ್ದು, 2.5 ಕೆಜಿ ತೂಕ ಹೊಂದಿದೆ.

ಜಯನಗರದ ಕ್ರೆಡೆಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.15ರ ವೇಳೆಗೆ ಕಿಟ್ಟಿಗೆ ಅಪ್ಪನಾದ ಪ್ರೊಮೋಶನ್ ಸಿಕ್ಕಿದೆ. ಸದ್ಯ ವೃತ್ತಿ ಜೀವನದ್ಲಲೂ ಶ್ರೀನಗರ ಕಿಟ್ಟಿ ಉತ್ತಮ ಅವಕಾಶಗಳನ್ನು ಹೊಂದಿದ್ದು, ಅವರಿಗೆ ಮನೆಗೆ ಸಾಕ್ಷಾತ್ ಲಕ್ಷ್ಮಿ ಬಂದು ಭಾಗ್ಯದ ಬಾಗಿಲನ್ನೇ ತೆರೆದಂತೆ ಸಂತಸಪಟ್ಟರಂತೆ. ಆಸ್ಪತ್ರೆಯಲ್ಲಿ ಕಿಟ್ಟಿ ಹಾಗೂ ಭಾವನಾರ ಬಂಧುಬಳಗ, ಸ್ನೇಹಿತರು ಬಂದು ಮಗುವಿಗೆ ಶುಭಹಾರೈಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀನಗರ ಕಿಟ್ಟಿ, ಭಾವನಾ, ಕನ್ನಡ ಸಿನಿಮಾ, ಪ್ರೇಮಿಗಳ ದಿನ