ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಬರಿಮಲೈಗೆ ಹೊರಟ ರಾಜ್ ಕುಮಾರ್ ಕುಟುಂಬ! (Shabarimalai | Ayyappa | Raj Kumar | Puneeth | Shivaraj Kumar)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸ್ವಾಮೀಯೇ ಶರಣಂ ಅಯ್ಯಪ್ಪ ಎಂದು ರಾಜಕುಮಾರ್ ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಹೌದು. ಇದೀಗ ರಾಜ್ ಕುಮಾರ್ ಕುಟುಂಬದ ಸದಸ್ಯರು ಅಯ್ಯಪ್ಪನ ದರ್ಶನಕ್ಕೆ ಹೊರಟು ನಿಂತಿದ್ದಾರೆ. ಈಗಾಗಲೇ ರಾಜು ಕುಟುಂಬ ವರ್ಗವಿಡೀ ಅಯ್ಯಪ್ಪ ದರ್ಶನದ ಹಿನ್ನೆಲೆಯಲ್ಲಿ ನಡೆದ ಸಾಂಪ್ರದಾಯಿಕ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಪ್ರಯಾಣ ಆರಂಭಿಸಿದ್ದಾರೆ.

ನಟ ಶಿವರಾಂ ಜೊತೆಯಲ್ಲಿ ನಮ್ಮ ಅಪ್ಪು ಅಲಿಯಾಸ್ ಪುನೀತ್ ಸೇರಿದಂತೆ 40 ಮಂದಿ ಗೆಳೆಯರು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದೇವೆ ಎಂದು ವಿವರ ನೀಡುತ್ತಾರೆ ಶಿವರಾಜ್ ಕುಮಾರ್.

ಇವರ ಜೊತೆಗೆ ರಾಘವೇಂದ್ರ ರಾಜ್ ಕುಮಾರ್, ಅವರ ಮಕ್ಕಳು, ಗೋವಿಂದರಾಜ್ ಅವರ ಮಕ್ಕಳು, ನಿರ್ಮಾಪಕರಾದ ಕುಮಾರ್, ವೆಂಕಟೇಶ್, ನಿರ್ದೇಶಕ ರಘುರಾಂ ಸೇರಿದಂತೆ ಹಲವು ಸ್ನೇಹಿತರು ಜೊತೆಯಾಗಿ ಹೊರಟಿದ್ದಾರಂತೆ. ಪ್ರಯಾಣ ಶುಭವಾಗಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಬರಿಮಲೈ, ಅಯ್ಯಪ್ಪ ಸ್ವಾಮಿ, ರಾಜ್ ಕುಮಾರ್, ಪುನೀತ್, ಶಿವರಾಜ್ ಕುಮಾರ್