ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿವಾಹಪೂರ್ವ ಸೆಕ್ಸ್ ತಪ್ಪಲ್ಲ: ತೀರ್ಪಿಗೆ ಖುಷ್ಬೂ ಖುಷ್! (Khushboo | Bollywoood | Kollywood | Premarital Sex | Unsafe Sex)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ವಿವಾಹಪೂರ್ವ ಲೈಂಗಿಕ ಸಂಪರ್ಕ ತಪ್ಪಲ್ಲ ಎಂದು ಸುಪ್ರೀಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿಗೆ ನಟಿ ಖುಷ್ಬೂಗೆ ಅದ್ಭುತ ಖುಷಿಯಾಗಿದೆಯಂತೆ. ಕೊನೆಗೂ ತನ್ನ ಹೋರಾಟಕ್ಕೆ ಜಯ ಸಂದಿಯೆಂದಿರುವ ಖುಷ್ಬೂ ಇದೊಂದು ಐತಿಹಾಸಿಕ ತೀರ್ಪು ಎಂದು ಪ್ರತಿಕ್ರಿಯಿಸಿದ್ದಾರೆ.

2005ರಲ್ಲಿ ಖುಷ್ಬೂ, ಮದುವೆಗೆ ಮುನ್ನ ಲೈಂಗಿಕ ಸಂಬಂಧ ನಡೆಸುವುದು ತಪ್ಪಲ್ಲವೆಂದು ಹೇಳಿ ಭಾರೀ ಕೋಲಾಹಲ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಖುಷ್ಬೂ ವಿರುದ್ಧ 22 ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ನಮ್ಮ ದೇಶದಲ್ಲಿ ನಮಗನಿಸಿದ್ದನ್ನು ಮಾತಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ. ಹಾಗಾಗಿ ನಾನು ನನಗನಿಸಿದ್ದನ್ನು ಹೇಳಿದ್ದೆ. ಈಗ ಕೋರ್ಟ್ ತೀರ್ಪು ಕೂಡಾ ನನ್ನ ಹೇಳಿಕೆಯನ್ನೇ ಪುರಸ್ಕರಿಸಿದೆ. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಖುಷ್ಬೂ ಹೇಳಿದ್ದಾರೆ.

ಎಲ್ಲಾ ನನ್ನ ಹೆಣ್ಣುಮಕ್ಕಳಿಗಾಗಿ!: ನನ್ನ ಹೇಳಿಕೆಯ ಫಲವಾಗಿ ಸುಪ್ರೀ ಕೋರ್ಟ್ ಈಗ ತೀರ್ಪು ಪ್ರಕಟಿಸಿದೆ. ಆದರೆ ಈ ಸುದೀರ್ಘ ಕಾನೂನು ಹೋರಾಟದಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿದ್ದು ನನ್ನ ಪತಿ ಸುಂದರ್. ನಾನು ನನ್ನ ಹೇಳಿಕೆಯ ಪರವಾಗಿ ಇಷ್ಟು ಸುದೀರ್ಘ ಕಾಲ ಹೋರಾಟ ನಡೆಸಿದ್ದು ನನ್ನ ಹೆಣ್ಣುಮಕ್ಕಳಿಗೋಸ್ಕರ. ಹೇಳಿಕೆ ನೀಡಿ ಹೆದರಿ ಕೇಸಿಗೆ ಹೆದರಿ ಪಲಾಯನ ಮಾಡಲಿಲ್ಲ. ಯಾಕೆಂದರೆ, ನನ್ನ ಹೆಣ್ಣುಮಕ್ಕಳೆದುರು ನಾನು ದುರ್ಬಲ ಎಂದು ಎನಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನನ್ನ ಹೆಣ್ಣುಮಕ್ಕಳು 'ನಮ್ಮ ಅಮ್ಮ ತುಂಬಾ ಸ್ಟ್ರಾಂಗ್' ಎನ್ನಬೇಕು. ಅವರಿಗೆ ನನ್ನಂಥ ಅಮ್ಮ ಸಿಕ್ಕಿದ್ದಕ್ಕೆ ಅವರು ಹೆಮ್ಮೆ ಪಡಬೇಕು ಎಂಬುದೇ ನನ್ನಾಸೆ. ಇದೀಗ ಆ ನನ್ನಾಸೆ ಫಲಿಸಿದೆ ಎಂದು ಖುಷ್ಬೂ ಹೇಳಿದ್ದಾರೆ.

ಈ ಬಗ್ಗೆ ತೀರ್ಪು ಹೊರಬರುವವರೆಗೆ ನಾನೇನೂ ಮಾತನಾಡುವ ಅವಕಾಶವಿರಲಿಲ್ಲ. ಈಗ ತೀರ್ಪು ಹೊರಬಂದಿದೆ. ಉತ್ತಮವಾದ ತೀರ್ಪೇ ಬಂದಿದೆ. ನಾನು ಯಾವತ್ತೂ ಮದುವೆಗೆ ಮುಂಚೆ ಲೈಂಗಿಕ ಸಂಪರ್ಕ ಮಾಡಿ ಎಂಬರ್ಥದ ಕರೆ ನೀಡಿರಲಿಲ್ಲ. ಮದುವೆಗೂ ಮುನ್ನ ಲೈಂಗಿಕ ಸಂಪರ್ಕ ಮಾಡಿದರೆ ಅದು ತಪ್ಪಲ್ಲ. ಆದರೆ, ಖಂಡಿತವಾಗಿಯೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾಡಬೇಕು ಎಂದಿದ್ದೆ. ಇದು ಇಂದಿನ ಯುವ ಪೀಳಿಗೆ ದುಡುಕಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮಾಡುವ ಲೈಂಗಿಕ ಸಂಪರ್ಕಕ್ಕೆ ಪೂರಕವಾಗಿ ನಾನು ಸುರಕ್ಷತಾ ಕ್ರಮ ಅನುಸರಿಸಿ ಎಂದಿದ್ದೆ ಎನ್ನುತ್ತಾರೆ ಖುಷ್ಬೂ.

ಮಾಧ್ಯಮಗಳು ತಿರುಚಿವೆ: ಆದರೆ ನಾನೇನು ಅಂದು ಹೇಳಿದ್ದೇನೆಯೋ, ಅದನ್ನೇ ಈಗಲೂ ಹೇಳುತ್ತೇನೆ ಎಂದು ಪುನರುಚ್ಛರಿಸಿರುವ ಖುಷ್ಬೂ, ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ. ನಾನು ಮದುವೆಗೂ ಮುನ್ನ ಲೈಂಗಿಕ ಸಂಪರ್ಕ ನಡೆಸುವ ಸಂದರ್ಭ ಒದಗಿದರೆ ಖಂಡಿತವಾಗಿಯೂ ಸುರತಕ್ಷಿತ ಕ್ರಮ ಅನುಸರಿಸಿ ಎಂದಿದ್ದೇನೆಯೇ ಹೊರತು, ಮದುವೆಗೆ ಮುನ್ನ ಲೈಂಗಿಕ ಸಂಪರ್ಕ ನಡೆಸಿ ಎಂಬರ್ಥದ ಹೇಳಿಕೆ ನೀಡಿಲ್ಲ. ಮಾಡಿದರೆ ಅದು ತಪ್ಪಲ್ಲ ಎಂದಿದ್ದೇನೆ ಅಷ್ಟೆ ಎಂದು ಖುಷ್ಬೂ ನುಡಿದರು.

ಕೊನೆಗೂ ಸುಪ್ರೀಂಕೋರ್ಟ್ ಸರಿಯಾಗಿಯೇ ಹೇಳಿದೆ. ಮದುವೆಗೆ ಮುನ್ನ ಲೈಂಗಿಕ ಸಂಪರ್ಕ ತಪ್ಪಲ್ಲ ಎಂದು ಹೇಳಿದೆ. ನಾನೂ ಆಗ ಅಲ್ಲಿದ್ದೆ. ಈ ತೀರ್ಪು ಕೇಳಿ ನನಗೆ ಅತ್ಯಂತ ಸಂತೋಷವಾಯಿತು. ಇದೊಂದು ಐತಿಹಾಸಿಕವಾದ ತೀರ್ಪು ಎಂದು ಖುಷ್ಬೂ ಹೇಳಿದರು.

ಇನ್ನು ಹೀಗೆ ಹೇಳಿಕೆ ನೀಡಲ್ಲ: ನಾನು ತುಂಬ ಸಣ್ಣ ವಯಸ್ಸಿನಿಂದಲೇ ಈ ಚಿತ್ರರಂಗಕ್ಕೆ ಬಂದಿದ್ದೇನೆ. 16ರ ಹರೆಯದಲ್ಲೇ ಮನೆಯ ಆರ್ಥಿಕ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೆ. ಆಗ ನನ್ನ ಹೆತ್ತವರು ವಿಚ್ಛೇದನ ಪಡೆದುಕೊಂಡಿದ್ದರಿಂದ ಮನೆಯ ಜವಾಬ್ದಾರಿ ನನ್ನ ಮೇಲೆ ಬಿದ್ದಿತ್ತು. ಹೀಗಾಗಿ ನನಗೆ ಬದುಕು ಸಾಕಷ್ಟು ಪಾಠ ಕಲಿಸಿದೆ. ನಾನು ಯಾವತ್ತೂ ತಪ್ಪು ಮಾಡಿಲ್ಲ. ಆದರೂ ಕೆಲವೊಂದು ತಪ್ಪುಗಳಾಗಿಬಿಡುತ್ತವೆ. ಹಾಗಾಗಿ ಇನ್ನು ಮುಂದೆ ನಾನು ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ತುಂಬ ಜಾಗರೂಕಳಾಗಿರುತ್ತೇನೆ. ಇನ್ನು ಮುಂದೆ ಇಂಥ ಹೇಳಿಕೆಗಳನ್ನು ನೀಡುವ ತಪ್ಪು ಮಾಡುವುದಿಲ್ಲ ಎಂದರು ಖುಷ್ಬೂ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿವಾಹಪೂರ್ವ ಸೆಕ್ಸ್, ಖುಷ್ಬೂ, ಬಾಲಿವುಡ್, ತಮಿಳು ಸಿನಿಮಾ