ನಮಿತಾ ಮೈಮಾಟದ ದಯದಿಂದಲೋ ಏನೋ, ಗೊತ್ತಿಲ್ಲ. ಒಟ್ಟಾರೆ, ರವಿಚಂದ್ರನ್ ಅವರ ಹೂ ಚಿತ್ರ ಭರ್ಜರಿಯಾಗಿಯೇ ಓಡುತ್ತಿದೆ. ವಿತರಕರ ಕೈ ತುಂಬಿರುವುದರಿಂದ ಇದೀಗ ಇತರ ಕನ್ನಡ ಚಿತ್ರಗಳಿಗೂ ಬೇಡಿಕೆ ಕುದುರಿದೆ ಎನ್ನಲಾಗುತ್ತಿದೆ. ಆದರೆ ಈ ಸಂದರ್ಭ ಹೂ ಚಿತ್ರ ನೋಡಿದ ಮೇಲೆ ನಮಿತಾಗೆ ಜ್ಞಾನೋದಯವಾಗಿದೆಯಂತೆ. ಆದರೆ ಅವರ ಈ ಜ್ಞಾನೋದಯದಿಂದ ಖಂಡಿತವಾಗಿಯೂ ನಮಿತಾರ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ. ಯಾಕೆಂದರೆ, ನಮಿತಾಗೆ ಬಿಕಿನಿ ಧರಿಸಿ ಬೇಸತ್ತು ಹೋಗಿದೆಯಂತೆ. ಇನ್ನು ಮುಂದಾದರೂ ನನಗೆ ಸೆಕ್ಸೀ ಪಾತ್ರಗಳನ್ನು ನೀಡದೆ ಸ್ಕಿನ್ ಶೋನಿಂದ ನನ್ನನ್ನು ಮುಕ್ತಿಗೊಳಿಸಿ ಎಂದು ನಮಿತಾ ನಿರ್ಮಾಪಕರನ್ನು ಗೋಗರೆದಿದ್ದಾರೆ!