ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲಕಾರ್ಮಿಕ ಪದ್ಧತಿ ವಿರುದ್ಧ ದನಿ: ಸ್ಕೂಲ್ ಮಕ್ಕಳು (School Makkalu | Kannada Cinema | Balaji Creations)
ಸುದ್ದಿ/ಗಾಸಿಪ್
Bookmark and Share Feedback Print
 
ಬಾಲಾಜಿ ಸಿನಿ ಕ್ರಿಯೇಷನ್ಸ್ 'ಸ್ಕೂಲ್ ಮಕ್ಕಳು' ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಕಿರುತೆರೆ ಕಲಾವಿದ ಬಾಗಲಕೋಟನ ಆರ್.ಡಿ.ಬಾಬು ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನುಎಸ್.ಕೇಶವಮೂರ್ತಿ ನಿರ್ಮಿಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳ ವರ್ತನೆ, ತರಗತಿ, ಅಲ್ಲಿನ ವಾತಾವರಣ, ಮಕ್ಕಳಲ್ಲಿನ ದೇಶಭಕ್ತಿ ಸುತ್ತಲೂ ಕಥೆ ಹೆಣೆಯಲಾಗಿದೆಯಂತೆ.

ಶಾಲೆ ಮಕ್ಕಳನ್ನು ವಿಚ್ಛಿದ್ರಕಾರಕ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದರ ವಿರುದ್ಧ ಹೋರಾಟ ನಡೆಸುವ ನಾಯಕ, ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಹೇಗೆ ಯಶಸ್ವಿಯಾಗುತ್ತಾನೆ. ಶಾಲೆ ಶಿಕ್ಷಕಿ ಇದಕ್ಕೆ ಹೇಗೆ ಸಾಥ್ ನೀಡುತ್ತಾಳೆ ಎನ್ನುವುದೇ ಕಥೆ. ಶಿಕ್ಷಕಿ ಪಾತ್ರದಲ್ಲಿ ಕಾವ್ಯಶ್ರೀ ನಟಿಸಲಿದ್ದಾರೆ.

ಸ್ಕೂಲ್ ಮಕ್ಕಳು ಚಿತ್ರ ಬಾಲಾಜಿ ಕ್ರಿಯೇಷನ್‌ನ ಚೊಚ್ಚಲ ಕಾಣಿಕೆಯಾಗಲಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಆರಂಭಗೊಂಡು 25 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಬಾಗಲಕೋಟ, ಅರಸಿಕೇರಿ ಸುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಆರಂಭಿಸಲಾಗುವುದು. ಚಿತ್ರದಲ್ಲಿ ರೇಖಾದಾಸ್, ಬ್ಯಾಂಕ್ ಜನಾರ್ದನ್ ಸೇರಿದಂತೆ ಇತರೆ ನಟರು ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಕೂಲ್ ಮಕ್ಕಳು, ಕನ್ನಡ ಸಿನೆಮಾ, ಬಾಲಾಜಿ ಕ್ರಿಯೇಷನ್ಸ್