ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೊಬ್ಬ ಹೆಮ್ಮೆಯ ರಾಮಚಂದ್ರ (Ramachandra | Kannada Cinema | Kadabeladingalu | Dweepa)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗದಲ್ಲಿ ತಾಂತ್ರಿಕ ವರ್ಗದವರಿಗೆ ಸಿಗುವ ಮನ್ನಣೆ ತುಂಬಾ ಕಡಿಮೆ. ಅದರಲ್ಲೂ ಕ್ಯಾಮರಾಮನ್ ಆದರಂತೂ ಬಹುತೇಕ ಚಿತ್ರದ ಟೈಟಲ್ ಕಾರ್ಡಿನಲ್ಲೇ ಇವರ ಹೆಸರು ಇರುವುದಿಲ್ಲ. ಆದರೆ ಕ್ಯಾಮರಾಮನ್‌ಗಳಲ್ಲಿ ಹಲವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರಲ್ಲಿ ಒಬ್ಬರು ರಾಮಚಂದ್ರ.

ಹೌದು, ನೆನಪಿರಲಿ ಚಿತ್ರದ ಕ್ಯಾಮರಾ ಕೈಚಳಕಕ್ಕೆ ರಾಜ್ಯ ಪ್ರಶಸ್ತಿ ಪಡೆದ ಈ ಸಾಹಸಿ ಇಂದು ಹಾಲಿವುಡ್ಡಿನ 'ಗಾಡ್ ಲಿವ್ಸ್ ಇನ್ ದಿ ಹಿಮಾಲಯಾಸ್' ಎಂಬ ಚಿತ್ರವನ್ನೂ ಮಾಡಿದ್ದಾರೆ. ಕೆಲಸದಲ್ಲಿ ಇವರಿಗಿರುವ ನಿಷ್ಠೆ ಎಷ್ಟೆಂಬುದನ್ನು ನೋಡಬೇಕಾದರೆ ಈ ವಿಷಯ ತಿಳಿಯಲೇ ಬೇಕು. ಮೊನ್ನೆ ಮೊನ್ನೆ ಇವರಿಗೆ ಕಮಲ್ ಹಸನ್ ಒಂದು ಆಫರ್ ನೀಡಿದ್ದರಂತೆ. ಅದನ್ನು ಇವರು ಒಪ್ಪಿಕೊಂಡಿಲ್ಲ. ಇದಕ್ಕೆ ಕಾರಣ ಕನ್ನಡದಲ್ಲಿ ಈಗಾಗಲೇ ಒಪ್ಪಿಕೊಂಡಿರುವ ಗಿರೀಶ್ ಕಾಸರವಳ್ಳಿ ಅವರ 'ಕನಸೆಂಬ ಕುದುರೆಯನ್ನೇರಿ' ಹಾಗೂ ಹರೀಶ್ ರಾಜ್ರ 'ಗನ್' ಚಿತ್ರಗಳು. ಇವನ್ನು ಮುಗಿಸದೇ ಹೊಸದನ್ನು ಒಪ್ಪಿಕೊಳ್ಳುವುದು ಎಲ್ಲ ರೀತಿಯಲ್ಲೂ ಗೊಂದಲಮಯವಾಗಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಹೆಸರು ತಂದುಕೊಟ್ಟ ತಾಯಿ ಸಾಹೇಬ, ದ್ವೀಪ ಮತ್ತಿತರ ಚಿತ್ರಗಳನ್ನುಟ್ಟು ಇವರು ಎಷ್ಟೆಲ್ಲಾ ಎತ್ತರಕ್ಕೆ ಏರಬಹುದಿತ್ತು. ಆದರೆ ದುರಾಸೆ ಬಿದ್ದವರಲ್ಲ ರಾಮಚಂದ್ರ. ತಮ್ಮ ಮಿತಿಯಲ್ಲಿ ಆದಷ್ಟು ನಿರಾತಂಕವಾಗಿ ಕೆಲಸ ಮಾಡಿಕೊಂಡು ಹೋಗುತ್ತಾರೆ. ಕಲಾತ್ಮಕ ಕೈಚಳಕ ಇವರಲ್ಲಿದೆ ಎನ್ನುವುದನ್ನು ತೋರಿಸಲು ಕಿರು ಅವಧಿಯಲ್ಲಿ ನಿರ್ಮಾಣಗೊಂದ 'ಕಾಡು ಬೆಳದಿಂಗಳು', 'ಮೌನಿ' ಹಾಗೂ 'ಕಲಾಕಾರ್' ಸಾಕ್ಷಿಯಾಗುತ್ತವೆ. ಇಂತಹ ಸೃಜನಶೀಲ ವ್ಯಕ್ತಿಗೊಂದು ಸೆಲ್ಯೂಟ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಮಚಂದ್ರ, ಕನ್ನಡ ಸಿನೆಮಾ, ಕಾಡ ಬೆಳದಿಂಗಳು, ದ್ವೀಪ