ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಲಂಡನ್‌ನಿಂದ ಬಂದಿಳಿದ ಉಪೇಂದ್ರರ 'ಸೂಪರ್' ತಂಡ (London | Sandalwood | Super | Upendra | Nayanatara)
ಸುದ್ದಿ/ಗಾಸಿಪ್
Bookmark and Share Feedback Print
 
PR
ಭಾರೀ ನಿರೀಕ್ಷೆಯ ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರತಂಡ ಲಂಡನ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದಿಳಿದಿದೆ. ನಟ, ನಿರ್ದೇಶಕ ಉಪೇಂದ್ರ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಚಿತ್ರತಂಡ ಇದೀಗ ಶನಿವಾರವಷ್ಟೇ ಲಂಡನ್‌ನಿಂದ ಬೆಂಗಳೂರಿಗೆ ಹಿಂತಿರುಗಿದ್ದಾರೆ.

ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ಲಂಡನ್‌ನ ಮನಮೋಹಕ ತಾಣಗಳಲ್ಲಿ ನಡೆದಿದೆ. ಚಿತ್ರದ ಹಾಡಿನ ಚಿತ್ರೀಕರಣ ಹಾಗೂ ಕೆಲವು ಭಾಗಗಳ ಚಿತ್ರೀಕರಣ ಲಂಡನ್‌ನಲ್ಲಿ ಕಾಲ ನಡೆದಿದೆ. ನಂತರ ಚಿತ್ರತಂಡ ದುಬೈಗೆ ತೆರಳಿ ಅಲ್ಲಿಯೂ ಚಿತ್ರದ ಪ್ರಮುಖ ಭಾಗಗಳನ್ನು ಮುಗಿಸಿ ಮರಳಿದೆ. ಒಟ್ಟು 20 ದಿನಗಳ ಕಾಲ ಈ ಚಿತ್ರೀಕರಣ ನಡೆದಿತ್ತು.

ಮೂಲಗಳ ಪ್ರಕಾರ, ಚಿತ್ರದ ಶೇ.80ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಚಿತ್ರದ ಕಥೆಯಲ್ಲಿ ಮೊದಲರ್ಧ ಲಂಡನ್‌ನಲ್ಲಿ ನಡೆಯುತ್ತದೆಯಾದ್ದರಿಂದ ಚಿತ್ರದ ಪ್ರಮುಖ ಭಾಗಗಳೆಲ್ಲವೂ ಲಂಡನ್‌ನಲ್ಲಿ ಚಿತ್ರೀಕರಿಸಲಾಗಿದೆ. ನಂತರದ ಭಾಗಗಳು ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ನಡೆಯುತ್ತದೆ.

ಉಪೇಂದ್ರ ಹಾಗೂ ನಯನತಾರಾ ಜೋಡಿಯ ಈ ಚಿತ್ರದಲ್ಲಿ ಸಾಧು ಕೋಕಿಲಾಗೆ ವಿಶೇಷ ಪಾತ್ರವಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್, ಸ್ಯಾಂಡಲ್ವುಡ್, ಸೂಪರ್, ಉಪೇಂದ್ರ, ನಯನತಾರಾ