ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶೀಘ್ರವೇ ಗಂಡೆದೆ ತೋರಲಿದ್ದಾರೆ ಚಿರಂಜೀವಿ ಸರ್ಜಾ (Gandedhe | Ragini | Chiranjeevi Sarja | Ramu)
ಸುದ್ದಿ/ಗಾಸಿಪ್
Bookmark and Share Feedback Print
 
PR
ಚಿರಂಜೀವಿ ಸರ್ಜಾ ತಮ್ಮ ಎರಡನೇ ಯತ್ನಕ್ಕೆ ಕೈ ಹಾಕಿದ್ದಾರೆ. ರಾಮು ಎಂಟರ್ ಪ್ರೈಸಸ್ ಮೂಲಕ 'ಗಂಡೆದೆ' ತೋರಲು ಹೊರಟಿದ್ದಾರೆ. ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿರುವ ರಾಮು ಬಹು ನಿರೀಕ್ಷೆಯಿಂದ ನಿರ್ಮಿಸಿರುವ ಚಿತ್ರ ಇದು. ಇವರ ಮೊದಲ ಚಿತ್ರ ವಾಯುಪುತ್ರ ಸಂಪೂರ್ಣ ನೆಲಕಚ್ಚಿತ್ತು. ಇದೀಗ ಅದರ ನೋವು ಮರೆಯಲು ಹಾಗೂ ಜನರ ವಿಶ್ವಾಸ ಗಳಿಸಲು ಗಂಡೆದೆಯಲ್ಲಿ ನಟಿಸುತ್ತಿದ್ದಾರೆ. ತಾವೊಬ್ಬ ಅಪೂರ್ವ ನಟ, ಅಭಿನಯ ಹಾಗೂ ಇತರೆ ಎಲ್ಲಾ ಕ್ಷೇತ್ರದಲ್ಲೂ ಪಳಗಿದ್ದೇನೆ ಎಂದು ತೋರಿಸಲು ಇವರಿಗೆ ಸಿಕ್ಕ ಅಮೂಲ್ಯ ಅವಕಾಶ ಈ ಚಿತ್ರವಾಗಿದೆ.

ಇದರಿಂದ ಈ ಚಿತ್ರದಲ್ಲಿ ಅವರು ಸ್ವತಃ ತಾವೇ ರಿಸ್ಕ್ ತೆಗೆದುಕೊಂಡು ಫೈಟ್ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೇವರಾಜ್ ಹಾಗೂ ರಂಗಾಯಣ ರಘು ಅವರಿಗೆ ವಿಶಿಷ್ಟ ಪಾತ್ರ ನೀಡಲಾಗಿದೆ. ಅತ್ಯುತ್ತಮ ಹಾಗೂ ವಿಭಿನ್ನ ಅಭಿನಯವನ್ನು ಅವರಿಂದ ತೆಗೆಸಲಾಗಿದೆ ಎನ್ನಲಾಗುತ್ತಿದೆ.

ಇದೊಂದು ಕಮರ್ಷಿಯಲ್ ಚಿತ್ರ. ರಾಗಿಣಿ ನಟಿಯಾಗಿ ಕಾಣಿಸಿದ್ದಾರೆ. ವೀರ ಮದಕರಿ, ಶಂಕರ್ ಐಪಿಎಸ್ ಚಿತ್ರಗಳಲ್ಲಿ ಮಿಂಚಿದ ಬೆಡಗಿ ರಾಗಿಣಿ ಈ ಚಿತ್ರದ ಮೂಲಕ ಮತ್ತೆ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚುತ್ತಿದ್ದಾರೆ.

ಅಂದ ಹಾಗೆ, ಚಿತ್ರದಲ್ಲಿ ಐದು ಹಾಡುಗಳಿವೆ. ರೌಡಿ ಮಗಳನ್ನು ಪ್ರೀತಿಸುವ ಧೈರ್ಯ ನಾಯಕ ತೋರುವ ಮತ್ತೊಂದು ಪಕ್ಕಾ ಲವ್ ಸ್ಟೋರಿ ಇದಾಗಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ್ದು ಯು ಸರ್ಟಿಫಿಕೆಟ್ ನಾಡಿ ಬೆನ್ನು ತಟ್ಟಿದೆಯಂತೆ.

ಚಿರಂಜೀವಿ ಸರ್ಜಾ ಪ್ರಕಾರ, ಇದು ತಮ್ಮ ಪಾಲಿಗೆ ಚಾಲೆಂಜಿಂಗ್ ಪಾತ್ರ ಎನ್ನುತ್ತಾರೆ. ಒಟ್ಟಾರೆ ಸಾಲು ಸಾಲು ಪ್ರೇಮ ಕಂ ಫೈಟಿಂಗ್ ಚಿತ್ರಗಳು ತೆರೆಗೆ ಬರುತ್ತಿದ್ದು, ಎಲ್ಲವೂ ಮಕಾಡೆ ಮಲಗುತ್ತಿವೆ. ಇದರ ನಡುವೆ ಗಂಡೆದೆಯಾದರೂ ಗೆಲ್ಲುತ್ತಾ ಅಂತ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಂಡೆದೆ, ರಾಗಿಣಿ, ಚಿರಂಜೀವಿ ಸರ್ಜಾ, ರಾಮು