ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಟಿ ಸೆಟ್ಟಿನಲ್ಲಿ ಥಯ್ಯಾ ಥಕ್ಕಾ ಕುಣಿದ ಸದಾ, ಶಿವಣ್ಣ (Sada | Sivaraj Kumar | Mylari | R.Chandru)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮೈಲಾರಿ ಹಾಡಿಗೆ ನಿರ್ದೇಶಕ ಆರ್. ಚಂದ್ರು ಬರ್ಜರಿ ಸೆಟ್ ಹಾಕಿಸಿದ್ದಾರೆ. ಕೋಟೆಯನ್ನು ಬಿಂಬಿಸುವ ಈ ಸೆಟ್, ಯಾವುದೇ ರೀತಿಯಲ್ಲೂ ಕೃತಕ ಅಂತ ಅನ್ನಿಸದ ಹಾಗೆ ಸಜ್ಜುಗೊಳಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಗಲ್ಲು ಗಲ್ಲೆನುತಾ ಗೆಜ್ಜೆ, ಗಲ್ಲು ತಾದಿಮಿತಾ... ಹಾಡನ್ನು ಪಾಶ್ಚಿಮಾತ್ಯ ಶೈಲಿಯಲ್ಲಿ ರಿಮಿಕ್ಸ್ ಮಾಡಲಾಗಿದೆ. ಈ ಹಾಡಿಗಾಗಿ ಚಂದ್ರು ಐದು ವಿಭಿನ್ನ ಸೆಟ್ ಹಾಕಿಸಿದ್ದಾರೆ. ಹಾಡಿನುದ್ದಕ್ಕೂ ಎಲ್ಲರೂ ಸೊಂಟವನ್ನು ಬಳಸಿದ್ದು ವಿಶೇಷ. ತರಹೇವಾರಿ ರೀತಿಯಲ್ಲಿ ಸೊಂಟವನ್ನು ಸುತ್ತುತ್ತಾ, ಅಲ್ಲಾಡಿಸುತ್ತಾ ನರ್ತಿಸುವ ವಿಭಿನ್ನ ಶೈಲಿಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಡಿಗೆ ಜಾನಪದದ ಟಚ್ ಸಹ ನೀಡಲಾಗಿದೆ ಎಂಬುದು ವಿಶೇಷ. ನಮ್ಮ ಶಿವರಾಜ್ ಕುಮಾರ್ ಈ ಹಾಡಿಗೆ ವಿಭಿನ್ನ ಬಗೆಯ ಉಡುಗೆ ಧರಿಸಿದ್ದಾರೆ. ಮಾಡರ್ನ್ ಸ್ಟೆಪ್ ಹಾಕಿದ್ದಾರೆ.

MOKSHA
ಇದೊಂದು ಆಕ್ಷನ್ ಕಂ ಲವ್ ಸ್ಟೋರಿ ಆಗಿದ್ದು, ಬಹಳ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಎರಡು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಚಿತ್ರದ ಚಿತ್ರೀಕರಣ ಶೇ.85 ಮುಗಿದಿದೆ.

ಚಿತ್ರದಲ್ಲಿ ಖ್ಯಾತ ತಮಿಳು ನಟಿ ಸದಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಇವರು ಕಾಣಿಸಿಕೊಂಡಿದ್ದು ವಿಶೇಷ. ಜಾನಪದ ಹಾಗೂ ಆಧುನಿಕ ಎರಡೂ ಮಾದರಿಯ ಸ್ಟೆಪ್ ಹಾಕುವುದನ್ನು ಎಂಜಾಯ್ ಮಾಡಿದೆ ಎನ್ನುವ ಸದಾ, ಶಿವರಾಜ್ ಕುಮಾರ್ ಜತೆ ಸ್ಟೆಪ್ ಹಾಕೋದು ತುಂಬಾನೇ ಕಷ್ಟ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸದಾ, ಶಿವರಾಜ್ ಕುಮಾರ್, ಮೈಲಾರಿ, ಆರ್ ಚಂದ್ರು