ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಹುಲಿ' ಬಂತು: ಹುಡುಗ್ರೆಲ್ಲಾ ಅಲ್ಲೋ ಕಲ್ಲೋಲ..! (Huli | Kishor | Jennifer Kotwal)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ ಹುಲಿ ಚಿತ್ರದ ಗೀತೆಯೊಂದರ ಚಿತ್ರೀಕರಣ ಭರದಿಂದ ಸಾಗಿದೆ. ಹೌದು, ನಗರದ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರದ 'ಅಲ್ಲೋಲ ಕಲ್ಲೋಲ ಆಗೋದ್ರು ಹುಡುಗ್ರೆಲ್ಲಾ ನೋ ಎಂಟ್ರಿ ಬೋರ್ಡಿಲ್ಲ ಫ್ರಿ ಎಂಟ್ರಿ ಸಿಗ್ತಲ್ಲ' ಅನ್ನುವ ಗೀತೆಗೆ ಹಿಮಾನ್ಸಿ. ಆದಿ ಲೋಕೇಶ್, ರವಿ, ಪ್ರೇಂ ಹಾಗೂ ನೃತ್ಯಗಾರರು ಹೆಜ್ಜೆ ಹಾಕಿದರು.

ಕಲಾ ನಿರ್ದೇಶಕ ಇಸ್ಮಾಯಿಲ್ ಈ ಗೀತೆಯ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಹಾಕಿದ್ದರು. ಕಿಶೋರ್‌ಗೆ ನಾಯಕಿಯಾಗಿ ಜೆನ್ನಿಫರ್ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಮುಗಿದಿದೆ. ಕೆಲ ಹಾಡಿನ ಚಿತ್ರೀಕರಣ ಹಾಗೂ ಡಬ್ಬಿಂಗ್ ಕೆಲಸ ಭಾಗ ಬಾಕಿ ಇದೆ ಎನ್ನಲಾಗುತ್ತಿದೆ.

ಓಂಪ್ರಕಾಶ್ ರಾವ್ ಚಿತ್ರದ ನಿರ್ದೇಶಕರು. ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಛಾಯಾಗ್ರಹಣ, ಡೆನ್ನಿಸ್ ಪ್ರಕಾಶ್ ಕಥೆ, ಡಿ. ಮನೋಹರ್ ಚಿತ್ರಕಥೆ, ಪಳನಿರಾಜ್ ಸಾಹಸ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಲಿ, ಕಿಶೋರ್, ಜೆನ್ನಿಫರ್ ಕೋತ್ವಾಲ್