ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರರಂಗವನ್ನು ಹೀಗಳೆದ ಎಫ್ಎಂ: ಬಂದ್, ಪ್ರತಿಭಟನೆ (Kannada Film Industry | Sudharani | Big FM 92.7)
ಸುದ್ದಿ/ಗಾಸಿಪ್
Bookmark and Share Feedback Print
 
ಇಡೀ ಕನ್ನಡ ಚಿತ್ರರಂಗವೇ ಎದ್ದು ನಿಂತಿದೆ. ಬಿಗ್ 92.7 ಎಫ್ಎಂ ರೇಡಿಯೋ ವಿರುದ್ಧ ದನಿಯೆತ್ತಿರುವ ಕನ್ನಡ ಚಿತ್ರರಂಗ ಭಾನುವಾರ ಅಂದರೆ ಆಗಸ್ಟ್ 1ರಂದು ಬಂದ್ ಮಾಡುವ ಜೊತೆಗೆ ಬಿಗ್ ಎಫ್ಎಂ ಕಚೇರಿಯ ಎದುರು ಭಾರೀ ಪ್ರತಿಭಟನೆ ನಡೆಸಲಿದ್ದಾರೆ.

ಬಿಗ್ 92.7 ಎಫ್ಎಂ ಚಾನಲ್ ತನ್ನ ಕಾರ್ಯಕ್ರಮವೊಂದರಲ್ಲಿ ಕನ್ನಡ ಸಿನಿಮಾ ರಂಗವನ್ನು ಲೇವಡಿ ಮಾಡುತ್ತಿದೆ ಎಂಬುದೇ ಈ ಪ್ರತಿಭಟನೆಗೆ ಕಾರಣ. ಕನ್ನಡ ಸಿನಿಮಾ ರಂಗವನ್ನು ಛತ್ರಿ ಎಂದು ಕಾರ್ಯಕ್ರಮದಲ್ಲಿ ಲೇವಡಿ ಮಾಡಿರುವ ಜೊತೆಗೆ ಸಿನಿಮಾ ರಂಗದ ದಿಗ್ಗಜರನ್ನೂ ಕಾರ್ಯಕ್ರಮಗಳಲ್ಲಿ ಲೇವಡಿ ಮಾಡಲಾಗುತ್ತಿದೆ. ಸುಧಾರಾಣಿ ಅವರಿಗೆ ಗೂಬೆ ಎಂದು ಹೀಯಾಳಿಸಲಾಗಿದ್ದು, ಬಿಂದಾಸ್ ಹುಡುಗಿ ಚಿತ್ರದ ಹಾಡುಗಳನ್ನೂ ತಮಾಷೆ ಮಾಡಲಾಗುತ್ತಿದೆ ಎಂದು ಚಿತ್ರರಂಗದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚಿತ್ರರಂಗದ ಬಹುತೇಕ ಪ್ರಮುಖರೆಲ್ಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ ಮಾತುಕತೆ ನಡೆಸಿದ್ದು, ಎಫ್ಎಂ ಚಾನಲ್ ವಿರುದ್ಧ ಪ್ರತಿಭಟನೆ ನಡೆಸುವ ಜೊತೆಗೆ ಚಿತ್ರರಂಗದ ಎಲ್ಲಾ ಕೆಲಸಗಳನ್ನು ರದ್ದುಗೊಳಿಸಿ ಬಂದ್ ಆಚರಿಸಲು ನಿರ್ಧರಿಸಿದೆ. ಹೀಗಾಗಿ ಚಿತ್ರಮಂದಿರಗಳೂ ಕೂಡಾ ಪ್ರದರ್ಶನ ರದ್ದು ಪಡಿಸಿವೆ.

ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿತ್ರರಂಗದ ಗಣ್ಯರನೇಕರು ಪಾಲ್ಗೊಂಡಿದ್ದರು. ಹಿರಿಯ ನಟಿ ಜಯಂತಿ, ಹಿರಿಯ ನಟ ಅಂಬರೀಷ್ , ನಟ ಸುದೀಪ್, ಅನು ಪ್ರಭಾಕರ್ ಸೇರಿದಂತೆ ಚಿತ್ರರಂಗದ ಅನೇಕರು ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದಾರೆ,
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಚಿತ್ರರಂಗ, ಬಿಗ್ ಎಫ್ಎಂ 927, ಸುಧಾರಾಣಿ