ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸುಂದರಿ ಹಂತಕಿ' ಶುಭಾ ಕಥೆಯೂ ಈಗ ಸಿನಿಮಾ! (Shubha | Ek Choriro Sathi | Lambani Cinema)
ಸುದ್ದಿ/ಗಾಸಿಪ್
Bookmark and Share Feedback Print
 
ನಟ ಓಂಪ್ರಕಾಶ್ ನಾಯಕ್ ಲಂಬಾಣಿ ಭಾಷೆಯಲ್ಲೇ ಚಿತ್ರವೊಂದನ್ನು ನಿರ್ಮಿಸಲು ಹೊರಟಿದ್ದಾರೆ. ಈ ಚಿತ್ರ ಎರಡು ರೀತಿಯಲ್ಲಿ ಸಾಂಸಾರಿಕ. ಹೌದು, ಚಿತ್ರಕ್ಕೆ ನಾಯಕರಾಗಿ ಓಂಪ್ರಕಾಶ್ ನಟಿಸುತ್ತಿದ್ದಾರೆ. ಇದಕ್ಕೆ ಅವರ ತಾಯಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ನಿರ್ಮಾಪಕಿ. ಚಿತ್ರದ ನಾಯಕಿ ಓಂ ಪತ್ನಿ ಅನುಪಮಾ. ಚಿತ್ರದ ಹೆಸರು 'ಏಕ್ ಚೋರೀರೊ ಸಾಥಿ' ಅಂತೆ. ಇದು ಲಂಬಾಣಿ ಭಾಷೆಯ ಚಿತ್ರ. ಈ ರೂಪದಲ್ಲಿ ಮಾತ್ರವಲ್ಲ, ಚಿತ್ರದ ಕಥೆಯೂ ಸಾಂಸಾರಿಕ ನೋಡುಗರನ್ನು ಸೆಳೆಯಲಿದೆ ಎನ್ನುವುದು ಚಿತ್ರ ನಿರ್ದೇಶಕ ಕಂ ನಾಯಕ ನಟರ ಅಭಿಪ್ರಾಯ.

ಏಕ್ ಚೋರೀರೊ ಸಾಥಿ ಅಂದರೆ ಒಂದು ಹುಡುಗಿಯ ಕಥೆ ಎಂದು ಅರ್ಥ. ಈ ಚಿತ್ರದಲ್ಲಿ ಲಂಬಾಣಿ ಬದುಕಿನ ಚಿತ್ರಣವನ್ನು ತೆರೆದಿಡಲಾಗಿದೆಯಂತೆ. ಹುಡುಗನನ್ನು ಅತಿಯಾಗಿ ಪ್ರೀತಿಸುವ ಹುಡುಗಿಯೊಬ್ಬಳ ಮನದಾಳವನ್ನು ಅರಿಯದ ಮನೆಯವರು ಆಕೆಯನ್ನು ಬೇರೊಬ್ಬರೊಂದಿಗೆ ಮದುವೆಯಾಗು ಎಂದು ಒತ್ತಾಯಿಸುತ್ತಾರೆ. ಆ ಸಂದರ್ಭದಲ್ಲಿ ಆಕೆಯ ಮನಸ್ಸು ಯಾವ ರೀತಿ ಛಿದ್ರವಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಯತ್ನ ಮಾಡಲಾಗಿದೆಯಂತೆ.

ಇಷ್ಟಕ್ಕೆ ಮುಗಿಯದೇ ಒಲ್ಲದ ಮನಸ್ಸಿನಿಂದ ಪಾಲಕರು ತೋರಿಸಿದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಪ್ರಿಯಕರನ ಜತೆ ಸೇರಿ ತಾನು ಮದುವೆ ಆಗಬೇಕಿದ್ದ ಹುಡುಗನನ್ನು ಕೊಂದು ಹಾಕುತ್ತಾಳೆ. ಇದು ಕಥೆಯ ಸಾರಾಂಶ.

ಎಲ್ಲೋ ಕೇಳಿದಂತಿದೆ ಅಂತ ಅನ್ನಿಸಿದರೆ ಅದಕ್ಕೆ ಸಿಗುವ ಉತ್ತರ ಹೌದು. ಇದು ತನ್ನ ಪ್ರಿಯಕರನ ಜತೆ ಸೇರಿ ಭಾವಿ ಪತಿಯಾದ ಸಾಫ್ಟ್‌ವೇರ್ ಎಂಜಿನಿಯರನ್ನು ಹತ್ಯೆಗೈದು ಇತ್ತೀಚೆಗೆ ಶಿಕ್ಷೆಗೆ ಒಳಗಾಗಿರುವ ಶುಭಾಳ ಕಥೆಯಂತೆ. ಹಾಗಂತ ಯಥಾವತ್ ಇದೆ ಎನ್ನಲಾಗದೆ ಇದ್ದರೂ, ಲಂಬಾಣಿ ಜೀವನ ಹಾಗೂ ಈ ರೀತಿಯ ಹಲವು ಘಟನೆಯನ್ನು ಆಧಾರವಾಗಿಟ್ಟುಕೊಂಡು ಒಂದು ವಿಭಿನ್ನ ಕಥೆ ಹೆಣೆಯಲಾಗಿದೆಯಂತೆ.

ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತಲಿನ ತಾಂಡಾಗಳಲ್ಲಿ 15 ದಿನ ಚಿತ್ರೀಕರಣ ನಡೆಯಲಿದೆಯಂತೆ. ನಿರ್ದೇಶಕರೇ ಖುದ್ದು 2 ಹಾಡನ್ನು ಚಿತ್ರಕ್ಕಾಗಿ ರಚಿಸಿದ್ದಾರೆ. ಶಿವಮೊಗ್ಗ ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆಯಲಿದೆ. ಮಹದೇವ್ ಛಾಯಾಗ್ರಹಣ ಇದ್ದು, ಚಿತ್ರದಲ್ಲಿ ಎರಡನೇ ನಾಯಕನಾಗಿ ಜಯರಾಜ್ ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶುಭಾ, ಏಕ್ ಚೋರಿರೋ ಸಾಥಿ, ಲಂಬಾಣಿ ಸಿನೆಮಾ