ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೃಷ್ಣನ್ ಲವ್ ಸ್ಟೋರಿ: ತೆಲುಗು ರಿಮೇಕಿಗೆ ಭಾರೀ ಡಿಮ್ಯಾಂಡು (Krishnan Love Story | Shashank | Uday Mehta | Ajay Rao | Radhika Pandit)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡದಲ್ಲಿ ಒಳ್ಳೆಯ ಚಿತ್ರಗಳಿಗೆ ಬರಗಾಲ ಬಂದಿದ್ದ ಸಮಯಯದಲ್ಲೇ ಬಿಡುಗಡೆಯಾಗಿ ಯಶಸ್ವೀ 50 ದಿನಗಳತ್ತ ಮುನ್ನುಗ್ಗುತ್ತಿರುವ ಅಜಯ್- ರಾಧಿಕಾ ಪಂಡಿತ್ ಜೋಡಿಯ 'ಕೃಷ್ಣನ್ ಲವ್ ಸ್ಟೋರಿ' ಚಿತ್ರಕ್ಕೀಗ ವ್ಯಾಪಕ ಬೇಡಿಕೆ ಬಂದಿದೆ. ತೆಲುಗು ಚಿತ್ರರಂಗದ ಅನೇಕರು ಕೃಷ್ಣನ್ ಲವ್ ಸ್ಟೋರಿ ರಿಮೇಕ್ ಹಕ್ಕಿಗಾಗಿ ಸಾಲುಗಟ್ಟಿ ನಿಂತಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕೃಷ್ಣನ್ ಲವ್ ಸ್ಟೋರಿ ಚಿತ್ರದ ವಿಶೇಷ ಪ್ರದರ್ಶನ ನಡೆದಿತ್ತು. ಈ ಸಂದರ್ಭ ಚಿತ್ರ ವೀಕ್ಷಿಸಿದ ತೆಲುಗು ಚಿತ್ರರಂಗದ ಗಣ್ಯರು ಚಿತ್ರದ ಹಕ್ಕಿಗಾಗಿ ಮುಂದೆ ಬಂದಿದ್ದಾರಂತೆ. 12 ಮಂದಿ ಈ ಚಿತ್ರದ ರಿಮೇಕ್ ಹಕ್ಕಿಗಾಗಿ ಕೃಷ್ಣನ್ ಲವ್ ಸ್ಟೋರಿಯ ನಿರ್ಮಾಪಕ ಉದಯ್ ಕೆ.ಮೆಹ್ತಾ ಹಾಗೂ ಉಮೇಶ್ ಜಿ ನಾಯ್ಕ್ ಅವರನ್ನು ಸಂಪರ್ಕಿಸಿದ್ದಾರಂತೆ. ಆದರೆ ಹಣದ ವಿಚಾರದಲ್ಲಿ ಇನ್ನೂ ಅದು ಅಂತಿಮವಾಗಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ತೆಲುಗಿಗೆ ರಿಮೇಕ್ ಮಾಡುತ್ತಿದ್ದರೆ, ಶಶಾಂಕ್ ಅವರೇ ಅಲ್ಲೂ ಈ ಚಿತ್ರವನ್ನು ನಿರ್ದೇಶಿಸಲಿ ಎಂಬ ಆಸೆ ನನ್ನದು ಎಂದು ನಿರ್ಮಾಪಕ ಉದಯ್ ಮೆಹ್ತಾ ತಿಳಿಸಿದರು.

ಸಿಕ್ಸರ್ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರರಂಗದಲ್ಲಿ ಸ್ವತಂತ್ರ ನಿರ್ದೇಶಕರಾಗಿ ಹೆಸರು ಪಡೆದಿದ್ದ ಶಶಾಂಕ್ ನಂತರ ಮೊಗ್ಗಿನ ಮನಸು ಚಿತ್ರ ನಿರ್ದೇಶಿಸಿ ಹಲವು ಪ್ರಶಸ್ತಿಗಳ್ನನು ಪಡೆದಿದ್ದರು. ಆ ಮೂಲಕ ವ್ಯಾಪಕ ಪ್ರಶಂಸೆಯ ಸುರಿಮಳೆಯನ್ನೂ ಪಡೆದರು ಇಂಥಹ ಸಂದರ್ಭದಲ್ಲಿ ಕೈಗೆತ್ತಿಕೊಂಡ ಕೃಷ್ಣನ್ ಲವ್ ಸ್ಟೋರಿ ಎಂಬ ನಿಜ ಜೀವನ ಆಧರಿತ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯೂ ಇತ್ತು. ಆದರೆ ನಿರೀಕ್ಷೆಯನ್ನು ಸುಳ್ಳಾಗಿಸದ ಶಶಾಂಕ್ ಮತ್ತೆ ಗೆದ್ದಿದ್ದಾರೆ. ಚಿತ್ರವೀಗ 50ನೇ ದಿನದ ಸಂಭ್ರಮದತ್ತ ಮುನ್ನುಗ್ಗುತ್ತಿದ್ದು, ಇನ್ನೂ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ. ಆ ಮೂಲಕ ಇತರ ಚಿತ್ರರಂಗದ ಗಣ್ಯರನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ. ಶಶಾಂಕ್‌ರಿಂದ ಇನ್ನೂ ಉತ್ತಮ ಚಿತ್ರಗಳು ಬರಲಿ ಎಂದೇ ಆಶಿಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೃಷ್ಣನ್ ಲವ್ ಸ್ಟೋರಿ, ಕನ್ನಡ ಸಿನೆಮಾ, ಶಶಾಂಕ್, ಉದಯ್ ಕೆ ಮೆಹ್ತಾ, ಅಜಯ್ ರಾವ್, ರಾಧಿಕಾ ಪಂಡಿತ್