ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಲವರ್ ಬಾಯ್ ಯಶ್ ಈಗ ರಾಜಧಾನಿಯ ಆಕ್ಷನ್ ಕಿಂಗ್ (Yash | Moggina Manasu | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇದುವರೆಗೂ ಲವರ್ ಬಾಯ್ ಆಗಿ ಜನರೆದುರು ಬಂದಿದ್ದ ನಟ ಯಶ್ ಆಕ್ಷನ್ ಕಿಂಗ್ ಆಗಿ ಪರಿವರ್ತನೆ ಗೊಂಡಿದ್ದಾರೆ. ಐವರು ಯುವಕರು ತಮ್ಮೂರು ಬಿಟ್ಟು ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಕಥೆ ಹೊಂದಿರುವ ರಾಜಧಾನಿ ಚಿತ್ರದಲ್ಲಿ ಇವರು ಈ ಬದಲಾವಣೆ ಮಾಡಿಕೊಂಡಿದ್ದಾರೆ. ನಗರ ಜೀವನವನ್ನು ಪರಿಚಯಿಸುವ ಈ ಚಿತ್ರ ಸಾಕಷ್ಟು ಕುತೂಹಲವನ್ನು ತನ್ನೊಳಗೆ ಅಡಗಿಸಿಕೊಂಡಿದ್ದು, ಯುವಕರು ನಗರಕ್ಕೆ ಬಂದು ಹೇಗೆ ಹಾಳಾಗುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ರವಿವರ್ಮ ಅವರ ಆಕ್ಷನ್ ಚಿತ್ರದ ಹೈಲೈಟ್. ರವಿತೇಜ ಹಾಗೂ ಸಂದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಪ್ರಕಾಶ್ ರೈ ಖಾಕಿ ತೊಟ್ಟು ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಪಡ್ಡೆ ಹುಡುಗರನ್ನು ಇವರು ಹೇಗೆ ನಿಯಂತ್ರಿಸುತ್ತಾರೆ ಎನ್ನುವುದು ಇಲ್ಲಿ ನೋಡಬಹುದಾಗಿದೆ.

ಯಶ್ ಈ ಚಿತ್ರಕ್ಕಾಗಿ ತಮ್ಮ ಬಾಡಿ ಲ್ಯಾಂಗ್ವೇಜ್, ಉಡುಗೆ, ಹೇರ್ ಸ್ಟೈಲ್ ಎಲ್ಲವನ್ನೂ ಬದಲಾಯಿಸಿಕೊಂಡಿದ್ದಾರೆ. ಎಲ್ಲಾ ಈ ಚಿತ್ರಕ್ಕಾಗಿ ಮಾಡಿರುವುದು ವಿಶೇಷ. ಆ ಮೂಲಕ ಒಬ್ಬ ನಟ ಚಿತ್ರಕ್ಕೆ ಹೊಂದುವ ಪಾತ್ರಕ್ಕೆ ಹೇಗೆ ಒಗ್ಗಿಕೊಳ್ಳಬೇಕು ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.

'ನಿಜಕ್ಕೂ ಇರುವುದನ್ನು ಬದಲಿಸಿ ಬೇರೆ ರೀತಿ ಸಜ್ಜಾಗುವುದು ಕಷ್ಟದ ಕೆಲಸ ಅನ್ನುವುದು ನನಗೆ ಈಗ ಅರಿವಾಯಿತು. ನಿಜಕ್ಕೂ ವ್ಯಕ್ತಿ, ವ್ಯಕ್ತಿತ್ವ ಬದಲಾದಂತೆ ಹಾವ ಭಾವವೂ ಬದಲಾಗುತ್ತದೆ ಎನ್ನುವುದಕ್ಕೆ ನನ್ನ ಬದಲಾದ ರೂಪ ಸಾಕ್ಷಿ. ಪಾತ್ರಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ' ಎನ್ನುತ್ತಾರೆ ಯಶ್. ಯಶ್‌ಗೆ ಒಳ್ಳೆಯದಾಗಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಶ್, ಮೊಗ್ಗಿನ ಮನಸು, ಕನ್ನಡ ಸಿನೆಮಾ